Home » Muniratna: ಮದುವೆಯ ಬಳಿಕ ಮಗಳಿಗಿತ್ತು ಅಕ್ರಮ ಸಂಬಂಧ – ಮಗಳ ಖಾಸಗಿ ವಿಡಿಯೋ ಮಾಡಿಸಿದ ಶಾಸಕ ಮುನಿರತ್ನ, ಮಹಿಳೆ ಗಂಭೀರ ಆರೋಪ

Muniratna: ಮದುವೆಯ ಬಳಿಕ ಮಗಳಿಗಿತ್ತು ಅಕ್ರಮ ಸಂಬಂಧ – ಮಗಳ ಖಾಸಗಿ ವಿಡಿಯೋ ಮಾಡಿಸಿದ ಶಾಸಕ ಮುನಿರತ್ನ, ಮಹಿಳೆ ಗಂಭೀರ ಆರೋಪ

0 comments

 

Muniratna : ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ಕೆಲವು ತಿಂಗಳ ಹಿಂದೆ ಅತ್ಯಾಚಾರದ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಅವರು ಜೈಲಿಗೂ ಕೂಡ ಹೋಗಿ ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಮುನಿರತ್ನ ಅವರ ಮೇಲೆ ಈ ಅತ್ಯಾಚಾರ ಆರೋಪ ಮಾಡಿದ ಮಹಿಳೆಗೆ ಇದೀಗ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.

 

ಹೌದು, ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದ ಮಹಿಳೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತಾನಾಡಿ ಮುನಿರತ್ನ ವಿರುದ್ಧ ಮತ್ತಷ್ಟು ಗಂಭೀರ ಆರೋಪಗಳನ್ನು ಮಾಡಿದರು.

 

ಮುನಿರತ್ನ ವಿರುದ್ಧ ಮಗಳ ಮೇಲೆಯೇ ಹನಿಟ್ರ್ಯಾಪ್ ಮಾಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ ಸಂತ್ರಸ್ತೆ ಮುನಿರತ್ನ ಮಗಳಿಗೆ ಮದುವೆಯಾದ ನಂತರವೂ ರಂಜಿತ್ ಎಂಬಾತನ ಜೊತೆ ಅಕ್ರಮ ಸಂಬಂಧವಿತ್ತು, ಹೀಗಾಗಿ ಮುನಿರತ್ನ ಮಗಳ ವಿರುದ್ಧವೇ ಹನಿಟ್ರ್ಯಾಪ್ ಮಾಡಿಸಿ, ಖಾಸಗಿ ವಿಡಿಯೊ ಮಾಡಿಸಿದ್ದ ಎಂದು ಹೇಳಿದ್ದಾರೆ.

 

ಅಲ್ಲದೆ 15 ವರ್ಷದ ಓರ್ವ ಅಪ್ರಾಪ್ತ ಬಾಲಕಿಯನ್ನು ಆಕೆಯ ಬಡತನದ ಅಸಹಾಯಕತೆ ಬಳಸಿಕೊಂಡು ಲೈಂಗಿಕ ಕಿರುಕುಳ ನೀಡಿರುವ ಮುನಿರತ್ನನನ್ನು ಯಾವುದೇ ಕಾರಣಕ್ಕೂ ವಿಧಾನಸೌಧ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

 

You may also like