5
Women Arrest: 34 ವರ್ಷದ ಮಹಿಳೆಯೋರ್ವರನ್ನು ಡ್ರಗ್ ಕಳ್ಳಸಾಗಣೆ ಮಾಡಲು ಯತ್ನ ಮಾಡುತ್ತಿದ್ದ ವೇಳೆ ಬಂಧನ ಮಾಡಲಾಗಿದೆ.
ಅಂಚಲುಮೂಡು ಮೂಲದ ಅನಿಲಾ ರವೀಂದ್ರನ್ ಎಂಬ ಮಹಿಳೆಯನ್ನು ಶಕ್ತಿಕುಲಂಗರ ಪೊಲೀಸರು ಮತ್ತು ಕೊಲ್ಲಂ ನಗರ ಪೊಲೀಸ್ ಜಿಲ್ಲಾ ಮಾದಕವಸ್ತು ವಿರೋಧಿ ವಿಶೇಷ ಕ್ರಿಯಾ ಪಡೆ ಶುಕ್ರವಾರ ಸಂಜೆ ವಶಕ್ಕೆ ಪಡೆದಿದ್ದಾರೆ. ಈಕೆಯಲ್ಲಿ 90ಗ್ರಾಂ ಎಂಡಿಎಂಎ ಡ್ರಗ್ಸ್ ಪತ್ತೆಯಾಗಿದೆ.
ಮೊದಲಿಗೆ ಮಹಿಳೆಯ ಬಳಿಕ 50ಗ್ರಾಂ ಎಂಡಿಎಂಎ ವಶಕ್ಕೆ ಪಡೆದುಕೊಂಡರು. ನಂತರ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಯ ಬಳಿಕ ಆಕೆಯಲ್ಲಿ 40 ಗ್ರಾಂ ಮಾದಕವಸ್ತು ಖಾಸಗಿ ಭಾಗಗಳಲ್ಲಿ ಅಡಗಿಸಿಟ್ಟಿರುವುದು ತಿಳಿದು ಬಂದಿದೆ. ಕೊಲ್ಲಂ ನಗರದ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸರಬರಾಜು ಮಾಡಲು ಮಹಿಳೆ ಈ ಕೃತ್ಯವನ್ನು ಮಾಡುತ್ತಿದ್ದಳು.
ಈ ಹಿಂದೆ ಕೂಡಾ ಈಕೆ ಮಾದಕವಸ್ತು ಕಳ್ಳಸಾಗಣಿಕೆಯ ಪ್ರಕರಣದಲ್ಲಿ ಭಾಗಿಯಾಗಿದ್ದಳು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
