Home » Mangaluru: ಮಂಗಳೂರಿನಲ್ಲಿ ಮತ್ತೆ ಈಜುಕೊಳ ದುರಂತ, ವ್ಯಕ್ತಿ ಸಾವು!

Mangaluru: ಮಂಗಳೂರಿನಲ್ಲಿ ಮತ್ತೆ ಈಜುಕೊಳ ದುರಂತ, ವ್ಯಕ್ತಿ ಸಾವು!

0 comments

Mangaluru: ಮಡಿಕೇರಿ ಕುಶಾಲನಗರ ಮೂಲದ ಪ್ರವಾಸಿ ನಿಶಾಂತ್‌ ಮಂಗಳೂರಿನ ಖಾಸಗಿ ರೆಸಾರ್ಟ್‌ ಈಜುಕೊಳದಲ್ಲಿ ಬಿದ್ದು ಸಾವಿಗೀಡಾಗಿದ್ದಾರೆ.

ಈಜುವ ಸಲುವಾಗಿ ಈಜುಕೊಳಕ್ಕೆ ಹಾರಿದ ಸಂದರ್ಭದಲ್ಲಿ ತಲೆ ಟ್ವಿಸ್ಟ್‌ ಆಗಿ ಈಜುಕೊಳ್ಳದಲ್ಲೇ ಸಾವು ಕಂಡಿದ್ದಾರೆ.

ನಿಶಾಂತ್‌ ಮೃತ ವ್ಯಕ್ತಿ.

ಕುಶಾಲನಗರದ ಮೊಬೈಲ್‌ ಗ್ಯಾಲರಿ ಶಾಪ್‌ ಮಾಲೀಕರಾಗಿದ್ದರು. ಮಂಗಳೂರಿಗೆ ಸ್ನೇಹಿತರ ಜೊತೆ ಪ್ರವಾಸಕ್ಕೆಂದು ತೆರಳಿದ ಸಂದರ್ಭ ದುರ್ಘಟನೆ ನಡೆದಿದೆ. ನೀರಿಗೆ ಹಾರಿದ ನಂತರ ನಿಶಾಂತ್‌ ಕೈ ಕಾಲು ಆಡಿಸದ್ದನ್ನು ಕಂಡ ಸ್ನೇಹಿತರು ಹಾಗೂ ಇತರರು ಮೇಲಕ್ಕೆತ್ತಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮೃತ ಹೊಂದಿದ್ದರು.

ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

You may also like