3
Newyork: ಭಾರತ ಮೂಲದ ಮಹಿಳೆ ಸರಿತಾ ರಾಮರಾಜು (48) ಎನ್ನುವಾಕೆ ಗಂಡನ ಮೇಲಿನ ಕೋಪದಿಂದ ತನ್ನ 11 ವರ್ಷದ ಮಗನನ್ನು ಕತ್ತು ಸೀಳಿ ಹತ್ಯೆ ಮಾಡಿದ ಘಟನೆ ನಡೆದಿದೆ.
ಬೆಂಗಳೂರು ಮೂಲದ ಪ್ರಕಾಶ್ ರಾಜು ಎಂಬುವವರ ಪುತ್ರ ಮತ್ತು ಕೃತ್ಯ ಎಸಗಿದ ಸರಿತಾ, ಪ್ರಕಾಶ್ ಪತ್ನಿ. ಈಕೆಯ ಬಂಧನ ಮಾಡಲಾಗಿದೆ. 26ವರ್ಷ ಜೈಲು ಶಿಕ್ಷೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
2018 ರಲ್ಲಿ ಬೆಂಗಳೂರು ಮೂಲದ ಪತಿ ಪ್ರಕಾಶ್ ರಾಜು ಅವರು ಸರಿತಾ ವಿಚ್ಛೇದನ ಪಡೆದಿದ್ದರು. 11 ವರ್ಷದ ಮಗನ ಕಸ್ಟಡಿಯನ್ನು ತಂದೆ ಪ್ರಕಾಶ್‌ಗೆ ನೀಡಲಾಗಿತ್ತು. ಆದರೆ ಕಸ್ಟಡಿ ಸಿಗಲಿಲ್ಲ ಎನ್ನುವ ಸಿಟ್ಟು ಸರಿತಾ ಇತ್ತು. ಆದರೂ ಸರಿತಾಗೆ ಮಗನ ಭೇಟಿಯಾಗುವ ಅವಕಾಶ ನೀಡಲಾಗಿತ್ತು.
ಈ ಸಂದರ್ಭದಲ್ಲಿ ಸರಿತಾ, ಮಗನನ್ನು ಮೂರು ದಿನ ಡಿಸ್ನಲ್ಯಾಂಡ್‌ಗೆ ಕರೆದುಕೊಂಡು ಹೋಗಿದ್ದಳು. ಹೋಟೆಲ್‌ನಲ್ಲಿ ಚಾಕುವಿನಿಂದ ಆತನ ಕತ್ತು ಸೀಳಿ ಕೊಲೆ ಮಾಡಿದ್ದು, ನಂತರ ಪೊಲೀಸರಿಗೆ ಕರೆ ಮಾಡಿದ್ದು, ಸಾಯಲೆಂದು ಔಷಧಿ ಸೇವಿಸಿರುವುದಾಗಿ ತಿಳಿಸಿದ್ದಾಳೆ.
