Justice Varma De-rostered: ನಿವಾಸದಲ್ಲಿ ಅಪಾರ ಪ್ರಮಾಣದ ಹಣ(money) ಪತ್ತೆಯಾದ ಆರೋಪದಲ್ಲಿ ತನಿಖೆ ಎದುರಿಸುತ್ತಿರುವ ಜಸ್ಟೀಸ್ ಯಶವಂತ್ ವರ್ಮಾ(Justice Yashwant Varma) ಅವರನ್ನು ದೆಹಲಿ ಹೈಕೋರ್ಟ್(Delhi high court) ರಿಜಿಸ್ಟ್ರಿ ಸೋಮವಾರ ನ್ಯಾಯಾಂಗ ಕೆಲಸದಿಂದ ವಜಾಗೊಳಿಸಿದೆ. ಮಾರ್ಚ್ 14ರಂದು ಅವರ ನಿವಾಸದ ಸ್ಟೋರ್ ರೂಂನಲ್ಲಿ ಅಗ್ನಿ ಅವಘಡ ಸಂಭವಿಸಿ ಸುಟ್ಟುಹೋದ ನೋಟಿನ ಕಂತೆಗಳು ಪತ್ತೆಯಾದ ಬಳಿಕ ಅವರ ವಿರುದ್ಧ ತನಿಖೆಗೆ ಮೂವರು ನ್ಯಾಯಾಧೀಶರ ಸಮಿತಿಗೆ ಸುಪ್ರೀಂ ಕೋರ್ಟ್(Supreme court) ಆದೇಶಿಸಿತ್ತು. ತಮ್ಮ ಮೇಲಿನ ಆರೋಪಗಳನ್ನು ನ್ಯಾಯಮೂರ್ತಿ ವರ್ಮಾ ನಿರಾಕರಿಸಿದ್ದಾರೆ.
ದೆಹಲಿ ಹೈಕೋರ್ಟ್ ಚೀಫ್ ಜಸ್ಟೀಸ್ ದೇವೇಂದ್ರ ಕುಮಾರ್ ಉಪಾಧ್ಯಾಯ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಜಸ್ಟೀಸ್ ವರ್ಮಾ ವಿರುದ್ಧ ಆಂತರಿಕ ತನಿಖೆ ನಡೆಸಿದ್ದಾರೆ. ಅವರ ತನಿಖಾ ವರದಿಯಲ್ಲಿ, ಈ ಪ್ರಕರಣದ ಬಗ್ಗೆ ವಿಸ್ತ್ರತ ತನಿಖೆ ನಡೆಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.
ಜಸ್ಟೀಸ್ ವರ್ಮ ನಿವಾಸದಲ್ಲಿ ಹಣ ಪತ್ತೆಯಾದ ಘಟನೆ ಬಳಿಕ ಅವರನ್ನು ಸುಪ್ರೀಂಕೋರ್ಟ್ ಸಿಜೆಐ ಖನ್ನಾ ಅವರು, ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಿ ಆದೇಶಿಸಿದ್ದರು. ಆದರೆ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆ, ಆಂತರಿಕ ತನಿಖೆ ನಡೆಸಲಾಯ್ತು. ಅದರ ಬೆನ್ನಲ್ಲೇ ಇದೀಗ ಜಸ್ಟೀಸ್ ಹುದ್ದೆಯಿಂದ ವರ್ಮಾ ಅವರನ್ನು ವಜಾಗೊಳಿಸಿರುವುದಾಗಿ ವರದಿ ವಿವರಿಸಿದೆ.
