7
Tirupati: 2025-26ರ ಆರ್ಥಿಕ ವರ್ಷಕ್ಕೆ ತಿರುಪತಿ ತಿಮ್ಮಪ್ಪ (Tirupati)ನಿಗೆ 5,259 ಕೋಟಿ ರೂ.ಗಳ ಬಜೆಟ್ ಅನ್ನು ಅನುಮೋದಿಸಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಗಳ (TTD) ಅಧ್ಯಕ್ಷ ಬಿ.ಆರ್. ನಾಯ್ಡು ತಿಳಿಸಿದ್ದಾರೆ.
ಟಿಟಿಡಿ ಟ್ರಸ್ಟಿಗಳ ಮಂಡಳಿಗಳು ಬಜೆಟ್ ಅನ್ನು ಅನುಮೋದಿಸಿದ್ದು ಜೊತೆಗೆ ‘ಪೋಟು’ (ದೇವಾಲಯದ ಅಡುಗೆಮನೆ) ಕೆಲಸಗಾರರಿಗೆ ವೇತನವನ್ನು ಹೆಚ್ಚಿಸುವುದು, ವೃದ್ಧರು ಮತ್ತು ಅಂಗವಿಕಲ ಭಕ್ತರಿಗೆ ಆಫ್‌ಲೈನ್ ದರ್ಶನ ನೀಡುವುದು ಸೇರಿದಂತೆ ಹಲವಾರು ಪ್ರಮುಖ ನಿರ್ಣಯಗಳನ್ನು ಮಂಡಳಿಯು ಅಂಗೀಕರಿಸಿದೆ.
