5
Madikeri: ಮಡಿಕೇರಿಯ ನಾಪೋಕ್ಲುವಿನ ನೆಲಜಿ ಗ್ರಾಮದ ನಿವಾಸಿ ಚಿಯಕಪೂವಂಡ ರಂಜು ತಿಮ್ಮಯ್ಯ (55) ಆತ್ಮಹತ್ಯೆ(Suicide) ಮಾಡಿಕೊಂಡ ವ್ಯಕ್ತಿ. ಸಾಲಬಾಧೆಯಿಂದ ಖಿನ್ನತೆಗೆ ಒಳಗಾಗಿದ್ದ ತಿಮ್ಮಯ್ಯ ಇಂದು ಬೆಳಿಗ್ಗೆ ನೆಲಜಿ ಗ್ರಾಮದ ತಮ್ಮ ಮನೆ ಸಮೀಪದಲ್ಲಿ ಗುಂಡು ಹೊಡೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಂಜು ತಿಮ್ಮಯ್ಯ ಅವರ ಪತ್ನಿ ತಾರಾಮಣಿ ಅವರು ನೀಡಿದ ದೂರಿನ ಅನ್ವಯ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
