Home » Mangaluru Jail: ಮಂಗಳೂರು ಜೈಲಿಗೆ ಜಾಮರ್‌ ಅಳವಡಿಕೆ; 1 ಕಿ.ಮೀ. ಸುತ್ತಮುತ್ತ ನೆಟ್‌ವರ್ಕ್‌ ಸಮಸ್ಯೆ!

Mangaluru Jail: ಮಂಗಳೂರು ಜೈಲಿಗೆ ಜಾಮರ್‌ ಅಳವಡಿಕೆ; 1 ಕಿ.ಮೀ. ಸುತ್ತಮುತ್ತ ನೆಟ್‌ವರ್ಕ್‌ ಸಮಸ್ಯೆ!

0 comments

Mangalore Jail: ಮಂಗಳೂರು ಜೈಲಿಗೆ ಅಳವಡಿಸಿರುವ ಜಾಮರ್‌ ಇದೀಗ ಸುತ್ತಮುತ್ತಲಿನ ನಿವಾಸಿಗಳ ಸಂಕಷ್ಟಕ್ಕೆ ಕಾರಣವಾಗಿದೆ. ಇದರಿಂದ ಜನರಿಂದ ಆಕ್ರೋಶ ವ್ಯಕ್ತವಾಗಿದೆ.

ಮಂಗಳೂರು ಜೈಲು ಕೈದಿಗಳ ಕಳ್ಳಾಟಗಳಿಂದ ಈ ಪರಿಸ್ಥಿತಿ ಉಂಟಾಗಿದೆ. ಗಾಂಜಾ ಪೊಟ್ಟಣ, ಮೊಬೈಲ್‌ ಸೇರಿ ಮಾದಕ ವಸ್ತುಗಳು ಪತ್ತೆಯಾಗಿತ್ತು. ಈ ಬೆನ್ನಲ್ಲೇ ಮೊಬೈಲ್‌ ಜಾಮರ್‌ ಅಳವಡಿಸಲಾಗಿದೆ. ಪರಿಣಾಮ ಜೈಲಿನ ಸುಮಾರು ಒಂದು ಕಿ.ಮೀ.ಪ್ರದೇಶದಲ್ಲಿ ನೆಟ್‌ವರ್ಕ್‌ ಸಮಸ್ಯೆ ಕಾಡುತ್ತಿದೆ. ಜೈಲಿನ ಕೂಗಳತೆ ದೂರದಲ್ಲಿ ನೂರಾರು ಮನೆ, ಫ್ಲ್ಯಾಟ್‌, ಅಂಗಡಿ, ಹೋಟೆಲ್‌ಗಳಿದ್ದು ಬಹುತೇಕರಿಗೆ ಮೊಬೈಲ್‌ ಜಾಮರ್‌ ಅಳವಡಿಕೆಯಿಂದ ನೆಟವರ್ಕ್‌ ಸಮಸ್ಯೆ ಕಾಡಿದೆ.

You may also like