Udupi: ಮಲ್ಪೆಯಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಸುಮೊಟೋ ಕೇಸ್ ಮಲ್ಪೆ ಠಾಣೆಯಲ್ಲಿ ದಾಖಲಾಗಿದೆ.
ಪ್ರತಿಭಟನೆ ಸಭೆಗೆ ಪೂರಕವಾಗುವಂತೆ ಮಂಗಳವಾರ ಯಾರೋ ಅಪರಿಚಿತ ವ್ಯಕ್ತಿ ವಾಟ್ಸಪ್‌ನಲ್ಲಿ ವಾಯ್ಸ್‌ನೋಟನ್ನು ತುಳು ಭಾಷೆಯಲ್ಲಿ ಹರಿಬಿಟ್ಟಿದ್ದು, ಈ ಸಂದೇಶ ಉದ್ರೇಕಕಾರಿಯಾಗಿ ಹೇಳಿಕೆಯನ್ನು ಆಡಿಯೋ ಕ್ಲಿಪ್ ಮಾಡಿ ಬಿತ್ತರಿಸಿರುವ ಕಾರಣ ಪೊಲೀಸರು ಸುಮೊಟೋ ಕೇಸ್ ದಾಖಲು ಮಾಡಿದ್ದಾರೆ.
ವಾಟ್ಸಪ್‌ನಲ್ಲಿ ಬಿಟ್ಟ ಸಂದೇಶವೇನು?
ಸೋಮವಾರ ಹೋಯಿತು; ಮಂಗಳವಾರ ಬಂತು ಆದರೂ ಇದುವರೆಗೂ ನಮ್ಮ ಮೀನುಗಾರ ಹೆಂಗಸರು ಬರಲಿಲ್ಲ. ಬಿಡುಗಡೆ ಆಗಲಿಲ್ಲ. ಅದಕ್ಕೆ ನಮ್ಮ ಮೀನುಗಾರ ಸಂಘದವರು ಗಂಗೊಳ್ಳಿಯಲ್ಲಿ ಅವರನ್ನು ಏನು ಮಾಡಿದ್ದಾರೆ ಹಾಗೆಯೇ ಎಲ್ಲರೂ ಒಟ್ಟಾಗಿ ಒಂದೊಂದು ಮನೆಯಲ್ಲಿ ಎಷ್ಟು ಜನ ಇದ್ದಾರೆ ಅವರೆಲ್ಲರೂ ರೋಡಿಗೆ ಇಳಿದು ಸ್ಟೈಕ್ ಮಾಡಬೇಕು. ಹಾಗೆ ಮಾಡಿದರೆ ಮಾತ್ರ ಎಸ್‌ಪಿಗೆ ಹಾಗೂ ಅವರ ಮೇಲೆ ಇದ್ದವರಿಗೂ ನಮ್ಮ ಶಕ್ತಿ ಎಷ್ಟು ಇದೆ ಎಂದು ಗೊತ್ತಾಗುತ್ತದೆ ಎಂದು ಆ ಸಂದೇಶದಲ್ಲಿ ತಿಳಿಸಲಾಗಿದೆ. 2014ನೇ ಸಾಲಿನಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಬಗ್ಗೆ ಈ ಅಪರಿಚಿತ ವ್ಯಕ್ತಿಯು ಆಡಿಯೋ ಕ್ಲಿಪ್‌ನಲ್ಲಿ ತಿಳಿಸಿದ್ದಾನೆ ಎಂದು ವರದಿಯಾಗಿದೆ.
