5
Actor Darshan: ನಟ ದರ್ಶನ್ ಆಪ್ತ ಧನ್ವೀರ್ ಗೌಡ, ರೀಷ್ಮಾ ನಾಣಯ್ಯ ಅಭಿನಯದ ವಾಮನ ಸಿನಿಮಾ ಎಪ್ರಿಲ್. 10 ರಂದು ತೆರೆಗೆ ಬರುತ್ತಿದೆ. ಇದಕ್ಕೂ ಮೊದಲು ಗುರುವಾರ ಮಾಗಡಿ ರೋಡ್‌ನ ಪ್ರಸನ್ನ ಥಿಯೇಟರ್‌ನಲ್ಲಿ ಗ್ರ್ಯಾಂಡ್ ಆಗಿ ವಾಮನ ಫ್ರೀ ರಿಲೀಸ್ ಇವೆಂಟ್ ಮಾಡಿ ಟ್ರೇಲರ್ ಲಾಂಚ್ ಮಾಡಲಾಗಿದೆ.
ಈ ಟ್ರೈಲರ್ ಅನ್ನು ನಟ ದರ್ಶನ್ ಅವರು ಲಾಂಚ್ ಮಾಡುತ್ತಾರೆ ಎಂದು ಅಭಿಮಾನಿಗಳು ಭಾವಿಸಿದ್ದು, ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಆದರೆ ನಟ ದರ್ಶನ್ ಬರಲಿಲ್ಲ.
ಇದರಿಂದ ಬೇಸರಗೊಂಡ ಅಭಿಮಾನಿಗಳು ಪ್ರಸನ್ನ ಥಿಯೇಟರ್‌ನ ಬಾಗಿಲು, ಕುರ್ಚಿ, ಕಿಟಕಿ ಫುಲ್ ಪೀಸ್ ಪೀಸ್ ಮಾಡಿದ್ದಾರೆ. ಸೆಕೆಂಡ್ ಕ್ಲಾಸ್‌ನ 80 ಹಾಗೂ ಬಾಲ್ಕನಿಯ 10 ಸೀಟು ಸಂಪೂರ್ಣ ಹಾನಿಯಾಗಿದೆ.
