Home » Puttur: ಪುತ್ತೂರು: ಮಹಿಳೆ ಸೇರಿ ಇಬ್ಬರ ಮೇಲೆ ಮಾರಕಾಯುಧ ಬೀಸಿದ ಹಸೈನ‌ರ್!!

Puttur: ಪುತ್ತೂರು: ಮಹಿಳೆ ಸೇರಿ ಇಬ್ಬರ ಮೇಲೆ ಮಾರಕಾಯುಧ ಬೀಸಿದ ಹಸೈನ‌ರ್!!

by ಕಾವ್ಯ ವಾಣಿ
0 comments

Puttur: ಮಹಿಳೆ ಹಾಗೂ ಆಕೆಯ ಸಹೋದರನ ಮೇಲೆ ವ್ಯಕ್ತಿಯೊಬ್ಬ ತಲ್ವಾರ್ ಬೀಸಿ ಹಲ್ಲೆಗೆ ಮುಂದಾದ ಘಟನೆ ಪುತ್ತೂರು (Puttur) ಗ್ರಾಮಾಂತರ ಠಾಣಾ ವ್ಯಾಪ್ತಿಯ ಸಂಪ್ಯದ ಮೂಲೆ ಎಂಬಲ್ಲಿ ಮಾ 27 ರಂದು ಸಂಜೆ ನಡೆದಿದೆ.

ಸಂಪ್ಯದ ಮೂಲೆ ನಿವಾಸಿ ರೇಖನಾಥ ರೈ ಹಾಗೂ ಅವರ ಅಕ್ಕ ಪುಷ್ಪಾವತಿ ರೈಯವರ ಮೇಲೆ ಹಲ್ಲೆ ಯತ್ನ ನಡೆದಿದೆ. ಹಸೈನರ್ ಎಂಬಾತ ಹಲ್ಲೆ ನಡೆಸಲು ಮುಂದಾಗಿರುವುದಾಗಿ ರೇಖನಾಥ ರೈಯವರು ತಿಳಿಸಿದ್ದಾರೆ. ಇವರ ಹಾಗು ಹಸೈನರ್ ಮಧ್ಯೆ ಜಾಗದ ತಕರಾರು ಕಳೆದ ಹಲವು ಸಮಯದಿಂದ ಇತ್ತು ಎನ್ನಲಾಗಿದೆ. ಅದು ಇಂದು ವಿಕೋಪಕ್ಕೆ ಹೋಗಿ ತಲ್ವಾರು ಬೀಸುವಲ್ಲಿಯವರೆಗೆ ತಲುಪಿರುವುದಾಗಿ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

You may also like