Home » Donald Trump: ಶ್ವೇತಭವನದಲ್ಲಿ ಇಫ್ತಾರ್‌ ಕೂಟ-ಟ್ರಂಪ್‌ ವಿರುದ್ಧ ಅಮೆರಿಕನ್‌ ಮುಸ್ಲಿಮರ ಆಕ್ರೋಶ!

Donald Trump: ಶ್ವೇತಭವನದಲ್ಲಿ ಇಫ್ತಾರ್‌ ಕೂಟ-ಟ್ರಂಪ್‌ ವಿರುದ್ಧ ಅಮೆರಿಕನ್‌ ಮುಸ್ಲಿಮರ ಆಕ್ರೋಶ!

0 comments

Donald Trump: ಅಮೆರಿಕ ಅಧ್ಯಕ್ಷರಾದ ಬಳಿಕ ಡೊನಾಲ್ಡ್‌ ಟ್ರಂಪ್‌ ರಂಜಾನ್‌ ಹಬ್ಬದ ಪ್ರಯುಕ್ತ ಇಫ್ತಾರ್‌ ಕೂಟ ಆಯೋಜನೆ ಮಾಡಿದ್ದರು. ಇಫ್ತಾರ್‌ ಕೂಟದಲ್ಲಿ ಅಮೆರಿಕನ್‌ ಮುಸ್ಲಿಂ ಶಾಸಕರು ಹಾಗೂ ಸಮುದಾಯದ ಮುಖಂಡರಿಗೆ ಆಹ್ವಾನ ನೀಡಿಲ್ಲ ಎಂದು ಟ್ರಂಪ್‌ ವಿರುದ್ಧ ಅಮೆರಿಕದ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಸ್ಲಾಂ ಧರ್ಮದ ಪವಿತ್ರ ತಿಂಗಳು ರಂಜಾನ್‌ ಅನ್ನು ಆಚರಿಸುತ್ತಾ ಬಂದಿದ್ದೇವೆ. ಇದು ವಿಶ್ವದಾದ್ಯಂತ ಮುಸ್ಲಿಂ ಬಾಂಧವರಿಗೆ ಪುಣ್ಯ ಸಂಪಾದಿಸುವ ಮಾಸ. ವಿಶ್ವದ ಅತ್ಯುತ್ತಮ ಧರ್ಮಗಳಲ್ಲಿ ಒಂದಾಗಿರುವ ಮುಸ್ಲಿಂ ಧರ್ಮವನ್ನು ಗೌರವಿಸುತ್ತೇನೆ ಎಂದು ರಂಜನಾ ಪ್ರಯುಕ್ತ ಶುಭ ಕೋರಿದ್ದಾರೆ.

ಶ್ವೇತಭವನದಲ್ಲಿ ಇಫ್ತಾರ್‌ ಕೂಟ ಆಯೋಜಿಸುವುದಕ್ಕೆ ಎರಡು ದಶಕಗಳ ಇತಿಹಾಸವಿದೆ. ಆದರೆ ಈ ಬಾರಿಯ ಇಫ್ತಾರ್‌ ಕೂಟದಲ್ಲಿ ಅಮೆರಿಕನ್‌ ಮುಸ್ಲಿಂ ಶಾಸಕರು, ಸಮುದಾಯಕ್ಕೆ ಸಂಬಂಧಿಸಿದ ಮುಖಂಡರನ್ನು ಆಹ್ವಾನಿಸಿಲ್ಲ. ಬದಲಾಗಿ ಮುಸ್ಲಿಂ ರಾಷ್ಟ್ರಗಳ ವಿದೇಶಿ ರಾಯಭಾರಿಗಳನ್ನು ಇಫ್ತಾರ್‌ ಕೂಟಕ್ಕೆ ಆಹ್ವಾನಿಸಲಾಗಿತ್ತು.

You may also like