Home » Sim block: 2025 ರ ಸಾಲಿನಲ್ಲಿ 8 ಲಕ್ಷ ಸಿಮ್ ಬ್ಲಾಕ್!

Sim block: 2025 ರ ಸಾಲಿನಲ್ಲಿ 8 ಲಕ್ಷ ಸಿಮ್ ಬ್ಲಾಕ್!

by ಕಾವ್ಯ ವಾಣಿ
0 comments
SIM Rules

Sim block: 2025 ನೇ ವರ್ಷದ ಮೊದಲ ಎರಡು ತಿಂಗಳಲ್ಲಿ ಕಾನೂನು ಜಾರಿ ಸಂಸ್ಥೆಗಳು ಸುಮಾರು 8 ಲಕ್ಷ ಸಿಮ್ ಕಾರ್ಡ್‌ಗಳನ್ನು ನಿರ್ಬಂಧಿಸಿವೆ. ಈ ವರ್ಷದ ಫೆಬ್ರವರಿ 28 ರವರೆಗೆ ಡಿಜಿಟಲ್ ವಂಚನೆಗೆ ಸಂಬಂಧಿಸಿದ 7.81 ಲಕ್ಷಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳನ್ನು ಕಾನೂನು ಜಾರಿ ಸಂಸ್ಥೆಗಳು ನಿರ್ಬಂಧಿಸಿವೆ (Sim block) ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಲೋಕಸಭೆಗೆ ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ವರದಿ ಮಾಡಿದ ಒಟ್ಟು 2,08,469 IMEI ಗಳನ್ನು ಭಾರತ ಸರ್ಕಾರ ನಿರ್ಬಂಧಿಸಿದೆ ಎಂದು ತಿಳಿಸಿದ್ದಾರೆ.

You may also like