12
SBI bank: : ಸೈಬರ್ ಅಪರಾಧಿಗಳು ಇದೀಗ ಡೈರೆಕ್ಟ್ ಆಗಿ ಬ್ಯಾಂಕ್ ಖಾತೆಗೆ ಕನ್ನ ಹಾಕಿದ್ದು, ಒಂದಲ್ಲ ಎರಡಲ್ಲ ಬರೋಬ್ಬರಿ 500 ಜನರ ಖಾತೆಯ ಹಣ ಖಾಲಿ ಆಗಿದ್ದು , ಗ್ರಾಹಕರು ಆತಂಕಕ್ಕೀಡಾಗಿದ್ದಾರೆ.
ಮೈಸೂರಿನ ಯಾದವಗಿರಿ, ಕುವೆಂಪುನಗರ, ವಿವೇಕಾನಂದರ ವೃತ್ತ ಬ್ರಾಂಚ್ ಸೇರಿ ಹಲವು ಎಸ್ಬಿಐ ಬ್ಯಾಂಕ್ ಶಾಖೆಗಳಲ್ಲಿನ ಗ್ರಾಹಕರ ಖಾತೆಯಲ್ಲಿದ್ದ ಹಣ ದಿಢೀರ್ ಆಗಿ ಮೈನಸ್ ಆಗಿದ್ದು, ಬೆಳಗ್ಗೆಯೇ ಗ್ರಾಹಕರು ಬ್ಯಾಂಕ್ ಮುಂದೆ ಆಗಮಿಸಿದ್ದಾರೆ.
ಇನ್ನು ಕೆಲವರ ಬ್ಯಾಂಕ್ ಬ್ಯಾಲೆನ್ಸ್ ಮೈನಸ್ 9,484 ರೂಪಾಯಿಯಾಗಿದೆ, ಈ ಬಗ್ಗೆ ಬ್ಯಾಂಕ್ ಸಿಬ್ಬಂದಿಯ ಬಳಿ ಕೇಳಿದರೆ ಯಾವುದೇ ರೆಸ್ಪಾನ್ಸ್ ನೀಡುತ್ತಿಲ್ಲ ಎಂದು ಗ್ರಾಹಕರು ಆಕ್ರೋಶ ಹೊರಹಾಕಿದ್ದಾರೆ.
ಸದ್ಯ 500 ಖಾತೆಗಳಿಂದ ಲಕ್ಷಾಂತರ ರೂಪಾಯಿ ಹೇಗೆ ಮಾಯವಾಯ್ತು ಎಂದು ಬ್ಯಾಂಕ್ ಸಿಬ್ಬಂದಿಗಳೇ ತಲೆ ಕೆಡಿಸಿಕೊಂಡು ಕೂತಿದ್ದು, ಈ ಬಗ್ಗೆ ಎಂದು ಪರಿಶೀಲನೆ ನಡೆಸುತ್ತಿದ್ದಾರೆ.
