Shocking case: ಉತ್ತರ ಪ್ರದೇಶದ(UP) ಲಕ್ಕೋದ ನರ್ಸಿಂಗ್ ಹೋಂನಲ್ಲಿ ಸಿಸೇರಿಯನ್‌ಗೆ(cesarean ) ಒಳಗಾದ 17 ವರ್ಷಗಳ ನಂತರ ಮಹಿಳೆಯ ಹೊಟ್ಟೆಯೊಳಗೆ(Stomach) ಶಸ್ತ್ರಚಿಕಿತ್ಸಾ ಕತ್ತರಿ ಪತ್ತೆಯಾಗಿದೆ. ಶಸ್ತ್ರಚಿಕಿತ್ಸೆಯ ನಂತರ ಸಂತ್ರಸ್ತ ಮಹಿಳೆ ನಿರಂತರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಲಕ್ಕೋ ವೈದ್ಯಕೀಯ ಕಾಲೇಜಿನಲ್ಲಿ(Medical Collage) ಇತ್ತೀಚೆಗೆ ತಪಾಸಣೆಯ ವೇಳೆ ಅವರ ಹೊಟ್ಟೆಯಲ್ಲಿ ಕತ್ತರಿ ಇರುವುದು ಎಕ್ಸ್-ರೇಯಲ್ಲಿ ಕಂಡುಬಂದಿದೆ. ಅದನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ.
ವರ್ಷಗಳಲ್ಲಿ ಹಲವಾರು ವೈದ್ಯರನ್ನು ಸಂಪರ್ಕಿಸಿದರೂ, ಸಂಧ್ಯಾಳ ಸ್ಥಿತಿ ಸ್ವಲ್ಪವೂ ಸುಧಾರಿಸಲಿಲ್ಲ. ಇತ್ತೀಚೆಗೆ ಲಕ್ನೋ ವೈದ್ಯಕೀಯ ಕಾಲೇಜಿನಲ್ಲಿ ನಿಯಮಿತ ವೈದ್ಯಕೀಯ ತಪಾಸಣೆಯ ಭಾಗವಾಗಿ ನಡೆಸಲಾದ ಎಕ್ಸ್-ರೇ ಪರೀಕ್ಷೆಯಲ್ಲಿ ಆಕೆಯ ಹೊಟ್ಟೆಯಲ್ಲಿ ಕತ್ತರಿ ಇರುವುದು ಕಂಡುಬಂದಾಗ ಈ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ವಿಷಯ ತಿಳಿದ ನಂತರ, ಆಕೆಯನ್ನು ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ (ಕೆಜಿಎಂಯು) ದಾಖಲಿಸಲಾಯಿತು, ಅಲ್ಲಿ ಮಾರ್ಚ್ 26ರಂದು ನಡೆದ ಸಂಕೀರ್ಣ ಶಸ್ತ್ರಚಿಕಿತ್ಸೆಯ ನಂತರ ಕತ್ತರಿಯನ್ನು ಯಶಸ್ವಿಯಾಗಿ ತೆಗೆಯಲಾಯಿತು.
ಕೆಜಿಎಂಯು ವಕ್ತಾರ ಸುಧೀರ್ ಸಿಂಗ್ ಘಟನೆಯ ವಿವರಗಳನ್ನು ದೃಢಪಡಿಸಿದರು, ಶಸ್ತ್ರಚಿಕಿತ್ಸೆ ಸವಾಲಿನದ್ದಾಗಿದ್ದರೂ, ಅದು ಅಂತಿಮವಾಗಿ ಯಶಸ್ವಿಯಾಯಿತು ಮತ್ತು ಸಂಧ್ಯಾ ಅವರನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಲಾಗಿದೆ ಎಂದು ಹೇಳಿದರು.
