Home » Jal Jivan Mission: ಜಲಜೀವನ್ ಮಿಷನ್ ನೀರಿನ ಟ್ಯಾಂಕ್‌ನಲ್ಲಿ ಬಿರುಕು: ಕಳಪೆ ಕಾಮಗಾರಿ ಹಿನ್ನೆಲೆ ಟ್ಯಾಂಕ್ ಕುಸಿತ

Jal Jivan Mission: ಜಲಜೀವನ್ ಮಿಷನ್ ನೀರಿನ ಟ್ಯಾಂಕ್‌ನಲ್ಲಿ ಬಿರುಕು: ಕಳಪೆ ಕಾಮಗಾರಿ ಹಿನ್ನೆಲೆ ಟ್ಯಾಂಕ್ ಕುಸಿತ

by ಹೊಸಕನ್ನಡ
0 comments

Jal Jivan Mission: ನಿಟ್ಟೂರು ಕಾರ್ಮಾಡು ಗ್ರಾಮ ಪಂಚಾಯತ್(Grama Panchayat) ಸಮೀಪ ಜಲ್ ಜೀವನ್ ಮಿಷನ್ ಯೋಜನೆಯಡಿಯಲ್ಲಿ ನೀರಿನ ಟ್ಯಾಂಕ್(Water Tank) ನಿರ್ಮಾಣ ಮಾಡಲಾಗಿತ್ತು. ಕೊಡಗು(Kodagu) ಜಿಲ್ಲಾ ಪಂಚಾಯತ್ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ವತಿಯಿಂದ ಗುತ್ತಿಗೆದಾರರು ಟೆಂಡರ್(tender) ಅವಧಿ ಮುಗಿದಿದ್ದರೂ ಕೆಲಸ ಪೂರ್ಣ ಗೊಳಿಸಿರಲಿಲ್ಲ. ಜನರಿಗೆ ಯಾವುದೇ ಉಪಯೋಗವಾಗಕ್ಕೂ ಬಾರದೇ ಕಾಮಗಾರಿ ಕಳಪೆಯಾಗಿದೆ. ಈ ಟ್ಯಾಂಕ್ ಕುಸಿಯುವ ಸಾಧ್ಯತೆಗಳಿವೆಯೆಂದು ನಿಟ್ಟೂರು ಗ್ರಾಮಪಂಚಾಯಿತಿ ಅಡಳಿತ ಜಿಲ್ಲಾಡಿಳಿತದ ಗಮನ ಸೆಳೆಯಲಾಗಿತ್ತು.

ಈ ಪ್ರಕಟಿಸಿದ ಹಿನ್ನಲೆಯಲ್ಲಿ ಕೊಡಗು ಜಿಲ್ಲಾ ಪಂಚಾಯತ್ ನೀರು ಮತ್ತು ನೖರ್ಮಲ್ಯ ಇಲಾಖೆಯ ಅಧಿಕಾರಿಗಳು ಟ್ಯಾಂಕ್ ಕೆಡವಿ ಹೋಸ ಟ್ಯಾಂಕ್ ನಿರ್ಮಾಣ ಕಾರ್ಯದ ಬದಲಾಗಿ ಇದೇ ಟ್ಯಾಂಕ್ ದುರಸ್ಥಿ ಕಾರ್ಯಕ್ಕೆ ಚಾಲನೆ ನೀಡಿದ್ದರು. ನಿನ್ನೆ ದಿವಸ ಕಾರ್ಮಿಕರು ಕೆಲಸ ಮಾಡುತಿದ್ದಾಗ ಟ್ಯಾಂಕಿನ ಮೇಲ್ಬಾಗದಲ್ಲಿ ಗಾರೆ ಹಾಕಲಾದ ಭಾಗ ಕುಸಿದಿದ್ದು ಕಟ್ಟಡ ಕಾರ್ಮಿಕರು ಕುದಲೆಳೆಯ ಅಂತರದಲ್ಲಿ ತರಚಿದ ಗಾಯಗಳೊಂದಿಗೆ ಆಫಾಯದಿಂದ ಪಾರಾಗಿರುತ್ತಾರೆ. ಮುಂಬರುವ ದಿನಗಳಲ್ಲಿ ಈ ಟ್ಯಾಂಕ್ ಅಪಾಯದ ಅಂಚಿನಲ್ಲಿದ್ದು ಸುತ್ತ ಮುತ್ತ ಶಾಲೆಗಳು, ವಸತಿ ನಿಲಯಗಳಿದ್ದು ಹೆಚ್ಚಿನ ಅಪಾಯ ಸಂಭವಿಸುವ ಸಾಧ್ಯತೆಗಳಿವೆ.

ಟ್ಯಾಂಕಿನ ಪಿಲ್ಲರ್ ಗಳಿಗೆ ಇಪ್ಪತ್ತು ಯಂ.ಯಂ ಕಬ್ಬಿಣದ ರಾಡ್ ಗಳ ಬದಲಾಗಿ ಹತ್ತುಯಂ.ಯಂ ರಾಡ್ ಗಳನ್ನು ಬಳಸಲಾಗಿದ್ದು ಪಿಲ್ಲರ್ ಗಳ ಸುತ್ತಳತೆ ಕನಿಷ್ಠ ಒಂದು ಅಡಿಗಳಾದಾರು ಇರಬೇಕಾಗಿದ್ದು ಎಲ್ಲ ಪಿಲ್ಲರ್ ಗಳು ಕೇವಲ ಎಂಟು ಇಂಚು ಸುತ್ತಳತೆ ಇದ್ದು ಈ ಟ್ಯಾಂಕ್ ಯಾವುದೇ ಸಂಧರ್ಭದಲ್ಲಿ ಕುಸಿಯುವ ಸಾಧ್ಯತೆಗಳಿದೆ. ಈ ಬಗ್ಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಕಾಟಿಮಾಡ ಶರೀನ್ ಮುತ್ತಣ್ಣ ಮತ್ತು ಪ್ರಮುಖರಾದ ಕೊಟ್ಟಂಗಡ ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

You may also like