6
Bengaluru: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ ₹62,000 ಕೋಟಿಯ 156 ಲಘು ಯುದ್ಧ ಹೆಲಿಕಾಪ್ಟರ್ (LCH) ಖರೀದಿ ಆರ್ಡರ್ ನೀಡಲು ಭದ್ರತಾ ಸಂಪುಟ ಆಯೋಗ ಶುಕ್ರವಾರ ಅನುಮೋದಿಸಿದೆ. ಚೀನಾ ಮತ್ತು ಪಾಕಿಸ್ತಾನ ಗಡಿಗಳಲ್ಲಿ ಕಾರ್ಯಾಚರಣೆಗಾಗಿ ಹೆಲಿಕಾಪ್ಟರ್‌ಗಳನ್ನು ಭಾರತೀಯ ಸೇನೆ ಮತ್ತು IAF ನಡುವೆ ಹಂಚಲಾಗುವುದು ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ. ಎಲ್ ಸಿಎಚ್ 16,400 ಅಡಿ ಎತ್ತರದಲ್ಲಿ ಲ್ಯಾಂಡ್ ಮತ್ತು ಟೇಕ್ ಆಫ್ ಮಾಡುವ ಸಾಮರ್ಥ್ಯ ಹೊಂದಿದೆ.
ಇದು 5,000 ಮೀಟರ್ (16,400 ಅಡಿ) ಎತ್ತರದಲ್ಲಿ ಲ್ಯಾಂಡಿಂಗ್, ಟೇಕ್ ಆಫ್ ಮಾಡುವ ವಿಶ್ವದ ಏಕೈಕ ಸೇನಾ ಹೆಲಿಕಾಪ್ಟರ್. ಇದು ಗಾಳಿಯಿಂದ ನೆಲಕ್ಕೆ, ಗಾಳಿಯಿಂದ ಗಾಳಿಗೆ ಕ್ಷಿಪಣಿ ಹಾರಿಸಬಲ್ಲದು. ಅವು ಕಿರಿದಾದ ಪ್ಯೂಸ್ಟೇಜ್ ಹೊಂದಿದ್ದು, ಪೈಲಟ್ ಮತ್ತು ಗನ್ನರ್ ಸರಾಗವಾಗಿ ಕೆಲಸ ಮಾಡಲು ಸಾಧ್ಯವಿದೆ.
