Home » Train Accident : ಬೆಂಗಳೂರಿನಿಂದ ಒಡಿಶಾಗೆ ಹೋಗ್ತಿದ್ದ ಎಕ್ಸ್‌ಪ್ರೆಸ್ ರೈಲು ಅಪಘಾತ- ಹಳಿ ತಪ್ಪಿದ 11 ಭೋಗಿಗಳು !! ಹಲವರ ಸ್ಥಿತಿ ಗಂಭೀರ

Train Accident : ಬೆಂಗಳೂರಿನಿಂದ ಒಡಿಶಾಗೆ ಹೋಗ್ತಿದ್ದ ಎಕ್ಸ್‌ಪ್ರೆಸ್ ರೈಲು ಅಪಘಾತ- ಹಳಿ ತಪ್ಪಿದ 11 ಭೋಗಿಗಳು !! ಹಲವರ ಸ್ಥಿತಿ ಗಂಭೀರ

0 comments

Train Accident : ಬೆಂಗಳೂರಿನಿಂದ ಗುವಾಹಾಟಿಗೆ ತೆರಳುತ್ತಿದ್ದ ಕಾಮಾಕ್ಯ ಎಕ್ಸ್​​​​ಪ್ರೆಸ್​​​ ರೈಲು ಹಳಿ ತಪ್ಪಿದ್ದು, ಓರ್ವ ಸಾವನ್ನಪ್ಪಿರುವ ಘಟನೆ ಒಡಿಶಾದ ಮಂಗೂಲಿ ನಿಲ್ದಾಣದ ಸಮೀಪದ ಚೌದ್ವಾರ್​​​​​​ ಬಳಿ ನಡೆದಿದೆ.

ಹೌದು, ಒಡಿಶಾದಲ್ಲಿ (Odisha Train Accident) ರೈಲು ಹಳಿ ತಪ್ಪಿ ಭಾರೀ ಅವಘಡ ಸಂಭವಿಸಿದ್ದು, ರೈಲಿನ 11 ಬೋಗಿಗಳು ಹಳಿ ತಪ್ಪಿರುವ ಘಟನೆ ವರದಿಯಾಗಿದೆ.ಒಡಿಶಾದ ಕಟಕ್‌ನ ಚೌದ್ವಾರದ ನಿರ್ಗುಂಡಿ ನಿಲ್ದಾಣದ ಬಳಿ ಭಾನುವಾರ ಕಾಮಾಕ್ಯ ಎಕ್ಸ್‌ಪ್ರೆಸ್‌ನ 11 ಬೋಗಿ ಹಳಿ ತಪ್ಪಿದ್ದು, ಒಡಿಶಾದಲ್ಲಿ ಭಾನುವಾರ ಸಂಭವಿಸಬಹುದಾಗಿದ್ದ ಬಹು ದೊಡ್ಡ ರೈಲು ಅಪಘಾತ ಕ್ಷಣ ಮಾತ್ರದಲ್ಲಿ ತಪ್ಪಿದೆ.

ಈ ದುರಂತದಲ್ಲಿ 50ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ರೈಲ್ವೇ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ರೈಲ್ವೆ ಅಧಿಕಾರಿಗಳ ಪ್ರಕಾರ, ಈ ರೈಲು ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ರೈಲ್ವೆ ಇಲಾಖೆಯು ಪ್ರಯಾಣಿಕರು ಮತ್ತು ಅವರ ಕುಟುಂಬಗಳಿಗೆ ಸಹಾಯವಾಣಿ ಸಂಖ್ಯೆ – 8991124238 ಅನ್ನು ಬಿಡುಗಡೆ ಮಾಡಿದೆ. ಈ ಅಪಘಾತದಿಂದಾಗಿ ಹಲವು ರೈಲುಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ.

You may also like