Home » Eid-ul-Fitr: ಕರಾವಳಿಯಲ್ಲಿ ನಾಳೆಯೇ(ಮಾ. 31) ಈದ್-ಉಲ್‌-ಫಿತರ್‌ ಆಚರಣೆ !!

Eid-ul-Fitr: ಕರಾವಳಿಯಲ್ಲಿ ನಾಳೆಯೇ(ಮಾ. 31) ಈದ್-ಉಲ್‌-ಫಿತರ್‌ ಆಚರಣೆ !!

0 comments

Eid-ul-Fitr: ಮುಸ್ಲಿಂ ಬಾಂಧವರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಈದ್-ಉಲ್‌-ಫಿತರ್‌ (Eid-ul-Fitr) ಹಬ್ಬ ಪ್ರಮುಖವಾದದ್ದು. ಒಂದು ತಿಂಗಳ ಪವಿತ್ರ ರಂಜಾನ್‌ ಉಪವಾಸದ ಬಳಿಕ ಬರುವ ಹಬ್ಬವೇ  ಇದು. ಇದೀಗ ಕರಾವಳಿಯಲ್ಲಿ ಮಾರ್ಚ್ 31ರಂದು ಅಂದರೆ ನಾಳೆ ಈದ್ ಉಲ್ ಫಿತರ್ ಆಚರಣೆ ಮಾಡಲಾಗುವುದಾಗಿ ಘೋಷಣೆ ಹೊರಡಿಸಲಾಗಿದೆ.

 

ಹೌದು, ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್, ಸೋಮವಾರ ಈದ್ ಉಲ್ ಫಿತರ್ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಶವ್ವಾಲ್ ಚಂದ್ರ ದರ್ಶನವಾದ ಹಿನ್ನೆಲೆ ಕರ್ನಾಟಕದ ಕರಾವಳಿಯಲ್ಲಿ ನಾಳೆ (ಮಾ.31) ರಂದು ಈದ್ ಉಲ್ ಫಿತರ್ ಆಚರಣೆ ಮಾಡಲಾಗುತ್ತಿದೆ.

 

ಅಂದಹಾಗೆ ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಸೇರಿದಂತೆ ಸೋಮವಾರ ಹಬ್ಬ ಆಚರಣೆ ಮಾಡಲು ಸೂಚಿಸಲಾಗಿದೆ. ನಾಳೆ ಈದ್ಗಾ, ಮಸೀದಿಗಳಲ್ಲಿ ಮುಸ್ಲಿಮರು ಸಾಮೂಹಿಕ ಹಬ್ಬದ ಪ್ರಾರ್ಥನೆ ಸಲ್ಲಿಸಲಿದ್ದಾರೆ.

You may also like