Bank Rules : ಕೆಲವೊಮ್ಮೆ ಬ್ಯಾಂಕಿನ ವ್ಯವಹಾರದ ಸಂದರ್ಭದಲ್ಲಿ ಅಥವಾ ಯುಪಿಐ ಮುಖಾಂತರ ಹಣ ವರ್ಗಾವಣೆ ಮಾಡುವ ವೇಳೆ ತಪ್ಪಾಗಿಯೋ ಅಥವಾ ಮಿಸ್ ಆಗಿಯೋ ಬೇರೊಬ್ಬರಿಂದ ಹಣವು ನಮ್ಮ ಖಾತೆಗೆ ಬರುವುದುಂಟು. ಅಥವಾ ಒಂದು ವೇಳೆ ಬಂದರೆ ನಾವು ಆ ಹಣವನ್ನು ಖರ್ಚು ಮಾಡಬಹುದೇ? ಹಣವನ್ನು ಬ್ಯಾಂಕಿನಿಂದ ಡ್ರಾ ಮಾಡಿದರೆ ಏನಾಗುತ್ತದೆ? ಈ ಕುರಿತಾಗಿ ನಿಯಮ ಹೇಳುವುದೇನು ಗೊತ್ತಾ?
ನಿಮ್ಮ ಬ್ಯಾಂಕ್ ಖಾತೆಗೆ ತಪ್ಪಾಗಿ ಇದ್ದಕ್ಕಿದ್ದಂತೆ ಹಣ ಬಂದರೆ ಮತ್ತು ನೀವು ಅದನ್ನು ಬಿಡಿಸಿ ಖರ್ಚು ಮಾಡಿದರೆ, ನಿಮಗೆ ಶಿಕ್ಷೆಯಾಗಬಹುದು. ಯಾಕೆಂದರೆ ಹೀಗೆ ಮಾಡುವುದು ಕಾನೂನುಬಾಹಿರವಾಗಿದೆ. ಹಣ ಬಂದ ಬಗ್ಗೆ ಬ್ಯಾಂಕಿಗೆ ಮಾಹಿತಿ ನೀಡಬೇಕು. ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ, ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಕನಿಷ್ಠ 3 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.
ಬ್ಯಾಂಕ್ ಅಕೌಂಟಿಗೆ ತಪ್ಪಾಗಿ ಹಣ ಬಂದರೆ ಏನು ಮಾಡಬೇಕು?
ಬ್ಯಾಂಕಿನಿಂದ ತಪ್ಪಾಗಿ ಬೇರೆಯವರ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬಂದರೆ, ಮೊದಲು ನಿಮ್ಮ ಬ್ಯಾಂಕಿಗೆ ತಿಳಿಸಿ. ಇದರ ನಂತರ, ಬ್ಯಾಂಕ್ ಈ ಹಣ ಎಲ್ಲಿಂದ ಮತ್ತು ಯಾವ ಮೂಲದಿಂದ ಬಂದಿದೆ ಎಂದು ಪರಿಶೀಲನೆ ಮಾಡಿಸಿ. ಇದು ತಪ್ಪಾಗಿ ನಡೆದಿದೆ ಎಂಬುದು ತಿಳಿದುಬಂದರೆ, ಆ ಹಣವನ್ನು ಮೂಲ ಬ್ಯಾಂಕ್ ಖಾತೆಗೆ ವಾಪಸ್ ಕಳುಹಿಸುತ್ತದೆ
