10
Yatnal: ಹಿಂದೂ ಫೈರ್ ಬ್ರಾಂಡ್, ಬಿಜೆಪಿ ನಾಯಕ ಬಸವನಗೌಡ ಪಾಟೀಲ ಅವರು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟನೆಗೊಂಡಿದ್ದಾರೆ. ಈ ಬೆನ್ನಲ್ಲೇ ಅವರು ಬಿಜೆಪಿ ರಾಜ್ಯ ವರಿಷ್ಟ ಬಿಎಸ್ ಯಡಿಯೂರಪ್ಪ ಹಾಗೂ ಅವರ ಮಗ ಬಿವೈ ವಿಜಯೇಂದ್ರ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ.
ಮಾಧ್ಯಮಗಳ ಎದುರುಗಡೆ ಎಲ್ಲೆಲ್ಲಿಯೂ ಕೂಡ ಅವರು ನನ್ನ ಉಚ್ಛಾಟನೆಗೆ ಯಡಿಯೂರಪ್ಪ ಮತ್ತು ಅವರ ಮಗ ವಿಜೇಂದ್ರನೆ ಕಾರಣ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಇದರ ನಡುವೆಯೇ ಅವರು ಯಡಿಯೂರಪ್ಪ ಕುರಿತು ಅಚ್ಚರಿ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ.
ಹೌದು, ನನ್ನನ್ನು ಪಕ್ಷದಿಂದ ಹೊರಹಾಕಲು ಅಪ್ಪ-ಮಗನೇ ಕಾರಣ ಎಂದು ಕಿಡಿಕಾರಿದ ಯತ್ನಾಳ್, ನನ್ನನ್ನು ಪಕ್ಷದಿಂದ ಹೊರಹಾಕದಿದ್ರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಯಡಿಯೂರಪ್ಪ ಬ್ಲ್ಯಾಕ್ ಮೇಲ್ ಮಾಡಿದ್ರು. ಹೀಗಾಗಿಯೇ ನನ್ನನ್ನು ವರಿಷ್ಠರು ಪಕ್ಷದಿಂದ ಹೊರಹಾಕಿದ್ರು ಎಂದು ಆರೋಪಿಸಿದ್ದಾರೆ.
