Home » Koppala: ರಸ್ತೆಗೆ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದ ಶಿಕ್ಷಕಿ ಸಾವು!

Koppala: ರಸ್ತೆಗೆ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದ ಶಿಕ್ಷಕಿ ಸಾವು!

by ಕಾವ್ಯ ವಾಣಿ
0 comments

Koppala: ಗಂಗಾವತಿಯ ಜಂಗಮರ ಕಲ್ಲುಡಿಯಲ್ಲಿ ಏಪ್ರಿಲ್ 3 ಗುರುವಾರ ಬೆಳಗ್ಗೆ ಶಿಕ್ಷಕಿ ಹರಿತಾ ಅವರು ಶಾಲೆಗೆ ಹೋಗುವಾಗ ವಿದ್ಯುತ್‌ ಅವಘಡಕ್ಕೆ ಬಲಿಯಾಗಿದ್ದಾರೆ. ರಸ್ತೆಯಲ್ಲಿ ಹೋಗುವಾಗ ತುಂಡಾಗಿದ್ದ ವಿದ್ಯುತ್ ತಂತಿಯನ್ನು ಗಮನಿಸದೆ ಶಿಕ್ಷಕಿಯು ಅದನ್ನು ತುಳಿದಿದ್ದಾರೆ.

ವಿದ್ಯುತ್ ಪ್ರವಹಿಸಿದ ಪರಿಣಾಮ ಹರಿತಾ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ.

You may also like