2
Mangaluru : ಮಂಗಳೂರಿನ ಪಣಮಂಬೂರಿನಲ್ಲಿ ಅಡಿಕೆ ಖರೀದಿಸಿ ಲಕ್ಷಾಂತರ ರುಚ್ಚಿಸಿರುವಂತಹ ಪ್ರಕರಣ ಒಂದು ಬೆಳಕಿಗೆ ಬಂದಿದೆ. ಇದೀಗ ಈ ಕುರಿತು ಕೇಸ್ ದಾಖಲಾಗಿದೆ
ಹೌದು, ಬೈಕಂಪಾಡಿಯಲ್ಲಿರುವ ಮಂಗಳೂರು ಅಗ್ರಿಕಲ್ಚರಿಸ್ಟ್ಸ್ ಸಹಕಾರಿ ಸಂಘ ಮುಖ್ಯ ಕಚೇರಿಯಲ್ಲಿ ಈ ಅವ್ಯವಹಾರ ನಡೆದಿದೆ. ಅಡಿಕೆ ವ್ಯವಹಾರ ಮಾಡಿ 29.51 ಲಕ್ಷ ರೂಪಾಯಿ ಪಾವತಿಸದೆ ವಂಚಿಸಿರುವ ಬಗ್ಗೆ ಗುಜರಾತ್‌ನ ಅಡಿಕೆ ವ್ಯಾಪಾರಿ ಸತ್ಯನಾರಾಯಣ ರಾಮಚಂದ್ರ ಭಟ್ (55) ವಿರುದ್ಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಸ್ಥೆಯೊಂದಿಗೆ ಆರೋಪಿಯು 2019ರಿಂದ ವ್ಯವಹಾರ ನಿರತನಾಗಿದ್ದರೂ ಕೇವಲ 1.13 ಲಕ್ಷ ರೂ.ಮಾತ್ರ ಪಾವತಿಸಿದ್ದ ಎನ್ನಲಾಗಿದೆ.
