2
Chitradurga: ವಿದ್ಯುತ್ ಸ್ಪರ್ಶ ಮಾಡಿ ಸ್ಥಳದಲ್ಲಿಯೇ ತಾಯಿ ಮತ್ತು ಮಗ ಸಾವಿಗೀಡಾಗಿರುವ ಘಟನೆ ಮೊಳಕಾಲ್ಮೂರು ತಾಲೂಕಿನ ತುಮಕೂರ್ಲಹಳ್ಳಿಯಲ್ಲಿ ನಡೆದಿದೆ.
ಬೋರಮ್ಮ (25), ಮಗ ಅಜಯ್ (05) ಮೃತರು.
ಬಾತ್‌ರೂಂ ಗೆ ಎಳೆದಿದ್ದ ವಯರ್ ಅಜಯಗೆ ಸ್ಪರ್ಶ ಮಾಡಿದೆ. ಇದನ್ನು ತಪ್ಪಿಸಲು ಹೋದ ತಾಯಿಗೆ ಶಾಕ್ ಹೊಡೆದಿದೆ. ಇಬ್ಬರೂ ಸ್ಥಳದಲ್ಲೇ ಮೃತ ಹೊಂದಿದ್ದಾರೆ.
ಘಟನಾ ಸ್ಥಳಕ್ಕೆ ಚಳ್ಳಕೆರೆ ಡಿವೈಎಸ್‌ಪಿ ರಾಜಣ್ಣ ಭೇಟಿ ನೀಡಿದ್ದು, ಪರಿಶೀಲನೆ ಮಾಡಿದ್ದಾರೆ. ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
