Home » Madhya Pradesh: ಬಾವಿಗೆ ಬಿದ್ದ ಒಬ್ಬನ ರಕ್ಷಣೆಗೆ ಹೋದ 8 ಜನ ಸಾವು!

Madhya Pradesh: ಬಾವಿಗೆ ಬಿದ್ದ ಒಬ್ಬನ ರಕ್ಷಣೆಗೆ ಹೋದ 8 ಜನ ಸಾವು!

0 comments

Madhya Pradesh: ಬಾವಿಗೆ ಬಿದ್ದ ಒಬ್ಬನನ್ನು ರಕ್ಷಣೆ ಮಾಡಲು ಒಬ್ಬರಾದ ಮೇಲೆ ಒಟ್ಟು ಏಳು ಹೋಗಿ ಎಂಟು ಜನ ಉಸಿರುಗಟ್ಟಿ ಸಾವಿಗೀಡಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಖಂಡ್ವಾ ಜಿಲ್ಲೆಯ ಕೊಂಡಾವತ್‌ ಗ್ರಾಮದ ಗಂಗೌರ್‌ ಹಬ್ಬದ ಆಚರಣೆ ನಡೆಯುತ್ತಿತ್ತು. ಇದೀಗ ಈ ಗ್ರಾಮ ಶೋಕ ಸಾಗರದಲ್ಲಿ ಮುಳುಗಿದೆ.

ಗಂಗೌರ ಹಬ್ಬದ ಆಚರಣೆಯ ಭಾಗವಾಗಿ ನೀರಿನಲ್ಲಿ ಮುಳುಗುವುದಕ್ಕಾಗಿ ಬಾವಿ ಸ್ವಚ್ಛ ಮಾಡುವ ಕೆಲಸದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಈ ದುರಂತ ನಡೆದಿದೆ. ಬಾವಿ ಸ್ವಚ್ಛಗೊಳಿಸುವ ವೇಳೆ ಹಗ್ಗ ತುಂಡಾಗಿ ಮಧ್ಯಾಹ್ನ ವೇಳೆ ಒಬ್ಬ ಯುವಕ ಬಾವಿಗೆ ಬಿದ್ದಿದ್ದಾನೆ. ಆತನಿಗೆ ಮೇಲೆ ಬರಲು ಆಗಲಿಲ್ಲ. ಇದನ್ನು ಕಂಡು ಒಬ್ಬೊಬ್ಬರಾಗಿ ಏಳು ಮಂದಿ ರಕ್ಷಣೆಗೆ ಇಳಿದಿದ್ದು, ಸಾವಿಗೀಡಾಗಿದ್ದಾರೆ. ವಿಷಾನಿಲದಿಂದ ಉಸಿರುಗಟ್ಟಿ ಈ ಸರಣಿ ಸಾವು ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.

ದುರಂತದಲ್ಲಿ ಮೃತರಾದವರನ್ನು ರಾಕೇಶ್, ವಾಸುದೇವ್, ಅರ್ಜುನ್, ಗಜಾನಂದ್, ಮೋಹನ್, ಅಜಯ್, ಶರಣ್ ಮತ್ತು ಅನಿಲ್ ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಖಾಂಡ್ವಾ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸಂತ್ರಸ್ತ ಯುವಕರ ಕುಟುಂಬ ಸದಸ್ಯರಿಗೆ 4 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ರಿಶವ್ ಗುಪ್ತಾ ತಿಳಿಸಿದ್ದಾರೆ.

You may also like