Murder: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಒಂದು ರೂಪಾಯಿಗೆ ನಡೆದ ಜಗಳದಿಂದ ಪಾನ್ ಶಾಪ್ ಮಾಲೀಕ ಗ್ರಾಹಕನನ್ನು ಕೊಂದಿರುವ (Murder) ಆಘಾತಕಾರಿ ಘಟನೆ ನಡೆದಿದೆ.
ಗ್ರಾಹಕ ವಿಶಾಲ್ ಭಲೇರಾವ್ ಎಂಬವರು ಬಾಪು ಸೋನವಾನೆ ಎಂಬವರ ಪಾನ್ ಶಾಪ್ ಅಂಗಡಿಯಿಂದ ಸಿಗರೇಟ್ ಖರೀದಿಸಿದ್ದಾರೆ. ಆದರೆ, 10 ರೂಪಾಯಿಯ ಸಿಗರೇಟ್‌ಗೆ ಬಾಪು ಹನ್ನೊಂದು ರೂಪಾಯಿ ಕೇಳಿದ್ದಾರೆ. ಗ್ರಾಹಕ ವಿಶಾಲ್ ಒಂದು ರೂಪಾಯಿ ಹೆಚ್ಚೇಕೆ ಕೇಳುತ್ತಿದ್ದೀರಿ ಎಂದು ಇಬ್ಬರ ನಡುವೆ ಗಲಾಟೆ ನಡೆದಿದೆ. ಸಿಟ್ಟಿಗೆದ್ದ ವಿಶಾಲ್ ಪಾನ್ ಶಾಪ್ ಮಾಲೀಕನನ್ನು ನಿಂದಿಸಿ ಅಂಗಡಿಯಲ್ಲಿದ್ದ ವಸ್ತುಗಳನ್ನು ಎಸೆಯಲು ಪ್ರಾರಂಭಿಸಿದ್ದಾನೆ. ಇದರಿಂದ ಕೆರಳಿದ ಬಾಪು ಕೋಲಿನಿಂದ ವಿಶಾಲ್ ತಲೆಗೆ ಹೊಡೆದಿದ್ದಾರೆ. ಸ್ವಲ್ಪ ಸಮಯದ ಬಳಿಕ ಚೇತರಿಸಿಕೊಂಡ ವಿಶಾಲ್ ತಾನು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ತೆರಳಿದ್ದಾರೆ. ಅಲ್ಲಿ ಮಾಲೀಕರು ವಿಶಾಲ್‌ನ ತಲೆಯಲ್ಲಿ ರಕ್ತಸ್ರಾವವಾಗುತ್ತಿರುವುದನ್ನು ಗಮನಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲಿ ವೈದ್ಯರು ತಲೆಗೆ ಮೂರು ಹೊಲಿಗೆ ಹಾಕಿ ಮನೆಗೆ ಕಳುಹಿಸಿದ್ದಾರೆ.
ಆದರೆ, ಮನೆಗೆ ಮರಳಿದ ಸ್ವಲ್ಪ ಸಮಯದ ಬಳಿಕ ಅಸ್ವಸ್ಥಗೊಂಡ ವಿಶಾಲ್ ಮತ್ತೆ ಆಸ್ಪತ್ರೆಗೆ ಕರೆದೊಯ್ದಾಗ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.
