Home » Threat: ಶೌಚಾಲಯಗಳಲ್ಲಿ ಸ್ಯಾನಿಟರಿ ಪ್ಯಾಡ್ ಇಡಬೇಕೆಂದು ಬೇಡಿಕೆ – ಶಾಸಕಿಗೆ ಬಂದ್ವು 8 ಸಾವಿರ ಬೆದರಿಕೆ ಕರೆ

Threat: ಶೌಚಾಲಯಗಳಲ್ಲಿ ಸ್ಯಾನಿಟರಿ ಪ್ಯಾಡ್ ಇಡಬೇಕೆಂದು ಬೇಡಿಕೆ – ಶಾಸಕಿಗೆ ಬಂದ್ವು 8 ಸಾವಿರ ಬೆದರಿಕೆ ಕರೆ

0 comments

Threat: ಸಾರ್ವಜನಿಕ ಶೌಚಾಲಯದಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್ ಗಳನ್ನು ಇಡಬೇಕು ಎಂದು ಪ್ರಸ್ತಾಪಿಸಿದ್ದಕ್ಕಾಗಿ ಶಾಸಕಿ obbarige ಬರೋಬ್ಬರಿ 8 ಸಾವಿರಕ್ಕೂ ಹೆಚ್ಚು ಜೀವ ಬೆದರಿಕೆ ಕರೆಗಳು ಬಂದಿವೆ.

ಜಪಾನಿನ ಕಮ್ಯುನಿಸ್ಟ್ ಪಕ್ಷವನ್ನು ಪ್ರತಿನಿಧಿಸುವ ಮೀ ಪ್ರಿಫೆಕ್ಚರಲ್ ಅಸೆಂಬ್ಲಿಯ 27 ವರ್ಷದ ಸದಸ್ಯೆ ಅಯಕಾ ಯೋಶಿಡಾ ಉಚಿತ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸಬೇಕೆಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.

ಸಾರ್ವಜನಿಕ ಶೌಚಾಲಯದಲ್ಲಿ ಟಾಯ್ಲೆಟ್ ಪೇಪರ್‌ನಂತೆ, ಎಲ್ಲೆಡೆ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸಬೇಕೆಂದು ನಾನು ಬಯಸುತ್ತೇನೆ. ಇದರಿಂದ ಸಾಕಷ್ಟು ಅನುಕೂಲವಾಗುತ್ತದೆ ಅಯಕಾ ಯೋಶಿಡಾ ಬರೆದುಕೊಂಡಿದ್ದರು. ಈ ಬೆನ್ನಲ್ಲೇ ಅವರಿಗೆ ಇಮೇಲ್ ಸೇರಿದಂತೆ ಕರೆಗಳ ಮೂಲಕ ಸುಮಾರು 8,000 ಕೊಲೆ ಬೆದರಿಕೆಗಳು ಬಂದಿವೆ.

ಯೋಶಿಡಾ ಅವರಿಗೆ ಶುಕ್ರವಾರ ರಾತ್ರಿ 8 ಗಂಟೆಯಿಂದ ಸೋಮವಾರ ಮಧ್ಯಾಹ್ನ 3:50 ರ ನಡುವೆ ಸರಿಸುಮಾರು ಒಂದು ನಿಮಿಷದ ಮಧ್ಯಂತರದಲ್ಲಿ ಸುಮಾರು 8 ಸಾವಿರ ಮೇಲ್ ಗಳು ಬಂದಿದ್ದು, ಎಲ್ಲವೂ ಕೂಡ ಒಂದೇ ಇಮೇಲ್ ವಿಳಾಸದಿಂದ ಕಳುಹಿಸಲಾಗಿದೆ ಎನ್ನಲಾಗಿದೆ.

You may also like