Home » Chikkaballapura: ಟೀಚರ್‌ ಹೊಡೆತಕ್ಕೆ ಕಣ್ಣು ಕಳೆದುಕೊಂಡ ಬಾಲಕ!

Chikkaballapura: ಟೀಚರ್‌ ಹೊಡೆತಕ್ಕೆ ಕಣ್ಣು ಕಳೆದುಕೊಂಡ ಬಾಲಕ!

0 comments

Chikkaballapura: ಒಂದನೇ ತರಗತಿ ವಿದ್ಯಾರ್ಥಿ ಕಣ್ಣು ಕಳೆದುಕೊಂಡು ಬಾಲಕನ ತಂದೆ ತಾಯಿ ಇದೀಗ ನ್ಯಾಯಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಧರಣಿ ಕೂತಿರುವ ಘಟನೆ ಚಿಂತಾಮಣಿ ನಗರದಲ್ಲಿ ಎ.04 (ಶುಕ್ರವಾರ) ನಡೆದಿದೆ.

ನಟರಾಜ್‌-ಅಂಜಲಿ ದಂಪತಿಗಳ ಪುತ್ರ ಯಶ್ವಂತ್‌ (8ವ)ಒಂದನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಯಗವಕೋಟೆ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸರಸ್ವತಿ ಕೋಲಿನಿಂದ ಬೇರೆ ಬಾಲಕನಿಗೆ ಹೊಡೆಯಲು ಹೋಗಿ ಯಶ್ವಂತ್‌ ಕಣ್ಣಿಗೆ ಕೋಲು ಬಿದ್ದಿದೆ. ಪರಿಣಾಮ ಬಲಭಾಗದ ಕಣ್ಣಿಗೆ ಹಾನಿಯಾಗಿದೆ.

ಪೋಷಕರು ಬಾಲಕನಿಗೆ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಬಾಲಕನಿಗೆ ಕಣ್ಣು ಕಾಣುವುದಿಲ್ಲ ಎಂದು ವೈದ್ಯರು ದೃಢೀಕರಿಸಿದ ಮೇಲೆ ಪೋಷಕರು ಶಿಕ್ಷಕಿಯ ವಿರುದ್ಧ ಪೊಲೀಸ್‌ ಠಾಣೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದರು.

ಶಿಕ್ಷಕಿಯ ಮೇಲೆ ಕ್ರಮ ಜರುಗಿಸಿ ಎಂದು ಅಲ್ಲಿಯವರೆಗೆ ಕಾನೂನು ಹೋರಾಟ ಮಾಡುವುದಾಗಿ ಪೋಷಕರು ತಿಳಿಸಿದ್ದಾರೆ.

You may also like