Crime News: ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿ ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ನಡುವೆ ವೈಮನಸ್ಸು ಮೂಡಿದ್ದು, ಇದರ ಜೊತೆಗೆ ಪತ್ನಿಯ ನಡವಳಿಕೆಯಿಂದ ಬೇಸತ್ತ ಪತಿ ಆಕೆಯ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿರುವ ಘಟನೆ ಬಿಳಿಕೆರೆ ಠಾಣಾ ವ್ಯಾಪ್ತಿಯ ಬೂಚಳ್ಳಿಯಲ್ಲಿ ಶುಕ್ರವಾರ ರಾತ್ರಿ ನಡೆದಿರುವ ಕುರಿತು ವರದಿಯಾಗಿದೆ.
ತುಮಕೂರು ಮೂಲದವಳೆನ್ನಲಾದ ಪವಿತ್ರ (26) ಕೊಲೆಯಾದ ಮಹಿಳೆ.
ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಬೂಚ ಹಳ್ಳಿಯ ನಾಗೇಶರವರ ಪುತ್ರ ಎಳನೀರು ವ್ಯಾಪಾರಿ ಸಚಿನ್ (26) ಶರಣಾಗಿರುವ ಪತಿ.
ಆರು ತಿಂಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದ ಪವಿತ್ರ ತನಗೆ ಯಾರೂ ಇಲ್ಲ, ತಾನು ಇನ್‌ಫೋಸಿಸ್ ಉದ್ಯೋಗಿ ಎಂದು ಹೇಳಿ ಆರೋಪಿ ಸಚಿನ್ ಮನೆಯವರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿದ್ದರು. ಆದರೆ ನಂತರ ಈಕೆಗೆ ಮದುವೆಯಾಗಿ ವಿಚ್ಛೇದನವಾಗಿದೆ ಎಂದು ಸಚಿನ್‌ಗೆ ತಿಳಿದಿದೆ. ಶುಕ್ರವಾರ ಇನ್‌ಫೋಸಿಸ್‌ಗೆ ಕರೆದೊಯ್ಯಲು ಮುಂದಾದಾಗ ಆರೋಗ್ಯ ಸರಿ ಇಲ್ಲ ಎನ್ನುವ ನೆಪ ಹೇಳುತ್ತಾರೆ. ಆಕೆಯ ಬಳಿ ಇರುವ ಐಡಿ ಕಾರ್ಡ್ ಪಡೆದು ವಿಚಾರಣೆ ಮಾಡಿದಾಗ ಇದು ನಕಲಿ ಐಡಿ ಎಂದು ತಿಳಿದು ಮನೆಗೆ ಬಂದ ಸಚಿನ್ ಮತ್ತು ಪವಿತ್ರ ನಡುವೆ ಗಲಾಟೆ ಆಗಿದೆ.
ಅನಂತರ ಹೆಂಡತಿಯನ್ನು ಗೋಬಿ ಎನ್ನುವ ಬಾ ಎಂದು ಪುಸಲಾಯಿಸಿದ್ದಾನೆ. ಅಪ್ರಾಪ್ತ ಬಾಲಕನ ನೆರವಿನ ಸಹಾಯದಿಂದ ಕತ್ತಿಗೆ ಹಗ್ಗ ಬಿಗಿದು ಸಾಯಿಸಿ, ಬಿಳಿಕೆರೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
