8
Mullikatte: ಕಾರೊಂದು ಡಿಕ್ಕಿಯಾಗಿ ರಿಕ್ಷಾ ಪಲ್ಟಿಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಿಕ್ಷಾ ಚಾಲಕ ಮಣಿಪಾಲ ಆಸ್ಪತ್ರೆಯಲ್ಲಿ ಸಾವಿಗೀಡಾದ ಘಟನೆ ಶನಿವಾರ (ಎ.5) ಬೆಳಿಗ್ಗೆ ನಡೆದಿರುವ ಕುರಿತು ವರದಿಯಾಗಿದೆ.
ರಿಕ್ಷಾ ಚಾಲಕ ಗೋಪಾಲ ಅವರ ತಲೆ, ಮುಖ, ಎದೆ ಹಾಗೂ ಕಾಲಿಗೆ ಬಲವಾದ ಏಟು ಬಿದ್ದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಸಾವಿಗೀಡಾಗಿರುವುದಾಗಿ ವರದಿಯಾಗಿದೆ.
ಎ.3 ರ ಗುರುವಾರ ಸಂಜೆ 7 ಗಂಟೆಯ ಸುಮಾರಿಗೆ ಮುಳ್ಳಿಕಟ್ಟೆ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ. ರಿಕ್ಷಾ ಚಾಲಕ ಗೋಪಾಲ ಹಾಗೂ ಕಾರಿನಲ್ಲಿದ್ದ ಚಂದ್ರ ಎಂಬ ಇಬ್ಬರು ಗಾಯಗೊಂಡಿದ್ದರು. ಗೋಪಾಲ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆಂದು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
