Home » Hassan; ಪ್ರೀತಿಯ ಹಸುವಿಗೆ ಅದ್ಧೂರಿ ಸೀಮಂತ ಮಾಡಿದ ಹಾಸನದ ರೈತ!

Hassan; ಪ್ರೀತಿಯ ಹಸುವಿಗೆ ಅದ್ಧೂರಿ ಸೀಮಂತ ಮಾಡಿದ ಹಾಸನದ ರೈತ!

0 comments

Hassan: ಗರ್ಭಿಣಿಯರಿಗೆ ಸೀಮಂತ ಶಾಸ್ತ್ರ ಮಾಡುವ ರೀತಿಯಲ್ಲಿಯೇ ಇಲ್ಲಿ ರೈತರೊಬ್ಬರು ತಾವು ಸಾಕಿದ ಹಸುವಿಗೆ ಸೀಮಂತ ಶಾಸ್ತ್ರನೆರವೇರಿಸಿದ ಅಪರೂಪದ ಸನ್ನಿವೇಶ ಹಾಸನ ನಗರದ ಚನ್ನಪಟ್ಟಣದಲ್ಲಿ ನಡೆದಿದೆ.

ದಿನೇಶ್ ಎಂಬ ರೈತ ತಾವು ಸಾಕಿದ ಹಳ್ಳಿಕಾರ್‌ತಳಿಯ ಹಸುವಿಗೆ ಕಲ್ಯಾಣ ಮಂಟಪದಲ್ಲಿ ಸಂಭ್ರಮ ದಿಂದ ಸೀಮಂತ ಶಾಸ್ತ್ರ ಮಾಡಿದ್ದಾರೆ. ಹಳ್ಳಿಕಾ‌ರ್ ಹಸು ಗರ್ಭಧರಿಸಿ 9 ತಿಂಗಳು ತುಂಬಿದ ಹಿನ್ನೆಲೆಯಲ್ಲಿ ಗೋವಿಗೆ ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ.

ಸೀರೆ, ಅರಿಶಿಣ ಕುಂಕುಮ, ಬಳೆ, ಡ್ರೈಫೂಟ್ಸ್, ಸೇರಿ 12 ತಟ್ಟೆಗಳಲ್ಲಿ ಹಣ್ಣು ತುಂಬಿದ್ದ ರೈತ ಕುಟುಂಬ ಮುತ್ತೈದೆಯರ ಕೈಯಲ್ಲಿ ಹಸುವಿಗೆ ಸೀಮಂತ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ನೆರವೇರಿಸಿದ್ದಾರೆ. ನೂರಾರು ಜನರನ್ನು ಆಹ್ವಾನಿಸಿ ಊಟ ಹಾಕಿಸಿದ್ದಾರೆ.

ಗೌರಿ ಹಸುವಿಗೆ ಅಲಂಕಾರ ಮಾಡಿ, ಆರತಿ ಬೆಳಗಿ ಹಣ್ಣು ನೀಡಿದರು. ಸೀಮಂತ ಶಾಸ್ತ್ರದಲ್ಲಿ ಐನೂರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದಾರೆ. ಎಲ್ಲರೂ ಗೌರಿಗೆ ಮನತುಂಬಿ ಹಾರೈಸಿದ್ದಾರೆ. ಬಂದಿದ್ದ ಎಲ್ಲರೂ ಭರ್ಜರಿ ಔತಣಕೂಟ ಏರ್ಪಡಿಸಲಾಗಿದ್ದು, ಭರ್ಜರಿ ಊಟ ಸವಿದು ತೆರಳಿದ್ದಾರೆ.

You may also like