4
Puttur: ಕಾಲೇಜಿಗೆ ರಜೆ ಇದ್ದ ಸಂದರ್ಭ ಮನೆಯಲ್ಲಿದ್ದ ವೇಳೆ ಆಟೋ ಚಾಲಕನೋರ್ವ ಪಿಯುಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಘಟನೆ ನಡೆದಿರುವ ಕುರಿತು ತಡವಾಗಿ ಬೆಳಕಿಗೆ ಬಂದಿದೆ.
ಆಟೋ ಚಾಲಕ ಮಂಜುನಾಥ್ ಕಟ್ಟತ್ತಡ್ಕ ಅತ್ಯಾಚಾರ ಮಾಡಿದ ಆರೋಪಿ. ಕಳೆದ ಆಗಸ್ಟ್ ತಿಂಗಳಲ್ಲಿ ಯುವತಿ ಒಬ್ಬಳೇ ಇದ್ದಾಗ ನೀರು ಕೇಳುವ ನೆಪ ಮಾಡಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ನಂತರ ಈ ವಿಚಾರ ಯಾರಲ್ಲೂ ಹೇಳಬಾರದು ಎನ್ನುವ ಬೆದರಿಕೆಯೊಡ್ಡಿ, ನಂತರದ ದಿನಗಳಲ್ಲಿ ಇದೇ ರೀತಿ 7-8 ಬಾರಿ ದೈಹಿಕ ಸಂಪರ್ಕ ಮಾಡಿರುವ ಕುರಿತು ಬಾಲಕಿ ನೀಡಿದ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಬಾಲಕಿಗೆ ಇತ್ತೀಚೆಗೆ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾದಾಗ ಆಕೆಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತಂದಾಗ ಆಕೆ ಗರ್ಭಿಣಿಯಾಗಿರುವುದು ತಿಳಿದು ಬಂದಿದೆ.
ಸದ್ಯ ಆರೋಪಿಯ ವಿರುದ್ಧ ದ ಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ 64 (2)(m), 352(3) BNS 2023 ಮತ್ತು ಕಲಂ 5(1) ಜೊತೆಗೆ 6 ಪೋಕ್ಸೋ ಆಕ್ಟ್ 2012 ರಂತೆ ಪ್ರಕರಣ ದಾಖಲು ಮಾಡಲಾಗಿದೆ.
