Home » Maharashtra: ಕಾಲೇಜಿನ ಬೀಳ್ಕೊಡುಗೆ ಸಮಾರಂಭದಲ್ಲಿ ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ವಿದ್ಯಾರ್ಥಿನಿ ಕುಸಿದು ಸಾವು!

Maharashtra: ಕಾಲೇಜಿನ ಬೀಳ್ಕೊಡುಗೆ ಸಮಾರಂಭದಲ್ಲಿ ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ವಿದ್ಯಾರ್ಥಿನಿ ಕುಸಿದು ಸಾವು!

0 comments

Maharashtra: ಕಾಲೇಜಿನ ಬೀಳ್ಕೊಡುಗೆ ಸಮಾರಂಭದಲ್ಲಿ ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ವಿದ್ಯಾರ್ಥಿನಿ ಕುಸಿದು ಸಾವಿಗೀಡಾದ ಘಟನೆ ಮಹಾರಾಷ್ಟ್ರದ ಧಾರಾಶಿವ್‌ನಲ್ಲಿ ನಡೆದಿದೆ.

ವರ್ಷಾ ಖರತ್‌ ಮೃತ ವಿದ್ಯಾರ್ಥಿನಿ. ಈಕೆ ಪರಂಡದ ಆರ್‌ಜಿ ಶಿಂದೆ ಕಾಲೇಜಿನಲ್ಲಿ ಭಾಷಣ ಮಾಡುತ್ತಿದ್ದು, ಆನ್‌ಲೈನ್‌ ಪ್ರಸಾರವಾಗುತ್ತಿದ್ದು. ಕೂಡಲೇ ವರ್ಷಾ ಪ್ರಜ್ಞೆ ತಪ್ಪಿ ಕುಸಿದು ಬೀಳುವ ಕ್ಷಣಗಳು ಸೆರೆಯಾಗಿದೆ. ನಗುತ್ತಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ವಿದ್ಯಾರ್ಥಿನಿ ಕೂಡಲೇ ಕೆಳಗೆ ಬಿದ್ದಿದ್ದು, ಆಕೆಯನ್ನು ಪರಾಂಡದ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೈದ್ಯರು ಆಕೆ ಮೃತ ಪಟ್ಟಿರುವುದಾಗಿ ಘೋಷಣೆ ಮಾಡಿದರು.

ವರ್ಷಾ 8 ವರ್ಷದವಳಿದ್ದಾಗ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ಹನ್ನೆರಡು ವರ್ಷಗಳಿಂದ ಯಾವುದೇ ಸಮಸ್ಯೆಗಳಿರಲಿಲ್ಲ. ಯಾವುದೇ ಔಷಧಿ ತೆಗೆದುಕೊಳ್ಳುತ್ತಿರಲಿಲ್ಲ. ಆದರೆ ಭಾಷಣ ಮಾಡುತ್ತಿರುವಾಗ ಹಠಾತ್‌ ಹೃದಯಾಘಾತವಾಗಿ ಸಾವು ಸಂಭವಿಸಿದೆ ಎನ್ನುವ ಮಾಹಿತಿ ಇದೆ.

ವಿದ್ಯಾರ್ಥಿನಿ ನಿಧನಕ್ಕೆ ಕಾಲೇಜು ಆಡಳಿತ ಮಂಡಳಿ ದುಃಖ ವ್ಯಕ್ತಪಡಿಸಿದ್ದು, ಒಂದು ದಿನದ ರಜೆ ಘೋಷಣೆ ಮಾಡಿದೆ.

You may also like