Home » Icecream: ಐಸ್ ಕ್ರೀಮ್, ತಂಪು ಪಾನೀಯ ಘಟಕಗಳಲ್ಲಿ ಹಾನಿಕಾರಕ ಡಿಟರ್ಜೆಂಟ್ ಪೌಡರ್, ಫಾಸ್ಪರಿಕ್ ಆಸಿಡ್ ಬಳಕೆ!

Icecream: ಐಸ್ ಕ್ರೀಮ್, ತಂಪು ಪಾನೀಯ ಘಟಕಗಳಲ್ಲಿ ಹಾನಿಕಾರಕ ಡಿಟರ್ಜೆಂಟ್ ಪೌಡರ್, ಫಾಸ್ಪರಿಕ್ ಆಸಿಡ್ ಬಳಕೆ!

0 comments

Icecream: ಐಸ್ ಕ್ರೀಮ್ (Icecream), ಜ್ಯೂಸ್ ಗಳ ತಯಾರಕರು ತಮ್ಮ ಲಾಭಕ್ಕಾಗಿ ಡಿಟರ್ಜೆಂಟ್, ಯೂರಿಯಾ ಅಥವಾ ಪಿಷ್ಟದಿಂದ ತಯಾರಿಸಿದ ಸಂಶ್ಲೇಷಿತ ಹಾಲನ್ನು ಬಳಸುತ್ತಿದ್ದು, ಸಕ್ಕರೆಯ ಬದಲು, ರುಚಿ ಮತ್ತು ಬಣ್ಣ ಹೆಚ್ಚಿಸಲು ಸ್ಯಾಕರಿನ್ ಬಳಕೆ ಮಾಡುತ್ತಿರುವುದನ್ನು ಎಫ್ ಡಿಎ ಪತ್ತೆ ಹಚ್ಚಿದೆ.

ಕರ್ನಾಟಕದ ಸ್ಥಳೀಯ ಐಸ್ ಕ್ರೀಮ್, ಐಸ್ ಕ್ಯಾಂಡಿ ಮತ್ತು ತಂಪು ಪಾನೀಯ ಉತ್ಪಾದನಾ ಘಟಕಗಳಲ್ಲಿ ಅರ್ಧದಷ್ಟು ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಬೆರೆಸಿ ಮಾರಾಟ ಮಾಡುತ್ತಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ (ಎಫ್ ಡಿಎ) ತಿಳಿಸಿದೆ. ಈ ರೀತಿ ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ತಯಾರಕರಿಗೆ ದಂಡ ಹಾಕಿ ಎಚ್ಚರಿಕೆ ನೀಡಿರುವುದು ಕೂಡ ಕಂಡುಬಂದಿದೆ.

ಡಿಟರ್ಜೆಂಟ್, ಯೂರಿಯಾ ಫಾಸ್ಪರಿಕ್ ಆಮ್ಲ ಬಳಕೆ

ಸತತ ಎರಡು ದಿನಗಳ ಕಾಲ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿದ್ದು, ಐಸ್ ಕ್ರೀಮ್, ಮತ್ತು ತಂಪು ಪಾನೀಯಗಳ ತಯಾರಕರು ತಮ್ಮ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಲು, ಡಿಟರ್ಜೆಂಟ್, ಯೂರಿಯಾ ಅಥವಾ ಪಿಷ್ಟದಿಂದ ತಯಾರಿಸಿದ ಸಂಶ್ಲೇಷಿತ ಹಾಲನ್ನು ಬಳಸುತ್ತಿದ್ದು, ಸಕ್ಕರೆಯ ಬದಲು, ರುಚಿ ಮತ್ತು ಬಣ್ಣ ಹೆಚ್ಚಿಸಲು ಸ್ಯಾಕರಿನ್ ಮತ್ತು ಆಹಾರಗಳಲ್ಲಿ ಬಳಕೆ ಮಾಡಲು ಅನುಮತಿ ಇರದಂತಹ ಬಣ್ಣಗಳನ್ನು ಬಳಸುತ್ತಿದ್ದಾರೆ. ಇದಲ್ಲದೆ, ಅನೇಕ ಐಸ್ ಕ್ಯಾಂಡಿ ಮತ್ತು ತಂಪು ಪಾನೀಯಗಳ ಘಟಕಗಳಲ್ಲಿ ಕಲುಷಿತವಾಗಿರುವ ಅಥವಾ ಕುಡಿಯಲು ಯೋಗ್ಯವಲ್ಲದ ನೀರನ್ನು ಬಳಸುತ್ತಿರುವುದನ್ನು ಅಧಿಕಾರಿಗಳು ಕಂಡುಹಿಡಿದಿದ್ದಾರೆ.

ಅಂಗಡಿಗಳಿಗೆ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ನೋಟಿಸ್ ನೀಡಿದ್ದು 38,000 ರೂ.ಗಳ ದಂಡವನ್ನು ವಿಧಿಸಿದೆ. ಜೊತೆಗೆ ತಕ್ಷಣ FDA ನಿಯಮಗಳನ್ನು ಅನುಸರಿಸಬೇಕು ಎಂದು ಎಚ್ಚರಿಕೆ ನೀಡಿದೆ. ಐಸ್ ಕ್ರೀಮ್ ಮತ್ತು ತಂಪು ಪಾನೀಯ ತಯಾರಕರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡುವುದರ ಜೊತೆಗೆ ಕೆಲವು ರೆಸ್ಟೋರೆಂಟ್, ಮೆಸ್ ಮತ್ತು ಹೋಟೆಲ್ ಗಳಲ್ಲಿಯೂ ತಪಾಸಣೆ ನಡೆಸಿದ್ದು, 590 ಸಂಸ್ಥೆಗಳ ಪೈಕಿ 214 ಸಂಸ್ಥೆಗಳಿಗೆ ಹೆಚ್ಚುವರಿಯಾಗಿ 1,15,000 ರೂ.ಗಳ ದಂಡ ವಿಧಿಸಿದೆ.

You may also like