7
Hariyana: ಭಾರತೀಯ ವಾಯುಪಡೆಯ ಹೆಮ್ಮೆಯ ಯೋಧ ಫ್ಲೈಟ್ ಲೆಫ್ಟಿನೆಂಟ್ ಸಿದ್ಧಾರ್ಥ್ ಯಾದವ್ ಅವರ ಹುಟ್ಟೂರಿನಲ್ಲಿ ಮಿಲಿಟರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿತು. ತ್ರಿವರ್ಣ ಧ್ವಜದಲ್ಲಿ ಹೊದಿಕೆಯಿದ್ದ ಸಿದ್ಧಾರ್ಥ್ ಅವರ ಪಾರ್ಥಿವ ಶರೀರದ ಮುಂದೆ ಕುಟುಂಬಸ್ಥರು, ಸ್ನೇಹಿತರು ಸೇರಿದ್ದರು.
ಮಾರ್ಚ್ 31 ರಂದು ನಿಶ್ಚಿತಾರ್ಥವಾಗಿದ್ದ ಸಿದ್ಧಾರ್ಥ್ ಅವರ ನಿಶ್ಚಿತ ವಧು ಸೋನಿಯಾ ಯಾದವ್ ಅವರ ದುಃಖ ಹೇಳತೀರದು. ಇವರಿಬ್ಬರ ವಿವಾಹವು ಇದೇ ವರ್ಷದ ನವೆಂಬರ್ 2 ರಂದು ನಡೆಯಬೇಕಿತ್ತು.
ವರದಿಗಳ ಪ್ರಕಾರ, ಸಿದ್ಧಾರ್ಥ್ ಅವರು ಏಪ್ರಿಲ್ 2 ರಂದು ಗುಜರಾತ್‌ನ ಜಾಮ್‌ನಗರದ ಬಳಿ ನಡೆದ ವಾಡಿಕೆಯ ತರಬೇತಿ ಹಾರಾಟದ ವೇಳೆ ಜಾಗ್ವಾರ್ ಫೈಟರ್ ಜೆಟ್ ಪತನಗೊಂಡ ಪರಿಣಾಮವಾಗಿ ಮೃತಪಟ್ಟರು.
ಈ ದುರಂತದ ಕುರಿತು ಭಾರತೀಯ ವಾಯುಪಡೆಯು ತನಿಖೆಗೆ ಆದೇಶಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ ತಾಂತ್ರಿಕ ದೋಷದಿಂದ ವಿಮಾನವು ಪತನಗೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
