Home » Shivamogga: ಸಿಡಿಲು ಬಡಿದು 93 ಚೀಲ ಅಡಿಕೆ ಭಸ್ಮ!

Shivamogga: ಸಿಡಿಲು ಬಡಿದು 93 ಚೀಲ ಅಡಿಕೆ ಭಸ್ಮ!

0 comments

Shivamogga: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಗ್ರಾಮ ಪಂಚಾಯಿತಿಯ ಮೂಡುವಳ್ಳಿಯಲ್ಲಿ, ರಜತ್‌ ಹೆಗ್ಡೆ ಅವರ ಮನೆಯಲ್ಲಿ ಸಿಡಿಲು ಬಡಿದ ಪರಿಣಾಮ 93 ಚೀಲ ಅಡಿಕೆ ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.

ಶನಿವಾರ ರಾತ್ರಿ 7 ರ ಸುಮಾರಿಗೆ ಈ ಭಾಗದಲ್ಲಿ ಭಾರೀ ಮಳೆ, ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗಿದ್ದು, ಈ ಸಮಯದಲ್ಲಿ ಮನೆಯ ಒಂದು ಭಾಗದ ಕೊಠಡಿಯಲ್ಲಿ ಇಟ್ಟಿದ್ದ ಅಡಿಕೆ ಚೀಲಗಳಿಗೆ ಸಿಡಿಲು ಬಡಿದು ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ. ಅದರ ಪಕ್ಕದಲ್ಲೇ ಇದ್ದ ಅಡಿಕೆ ಸುಲಿಯುವ ಯಂತ್ರಕ್ಕೂ ಬೆಂಕಿ ತಗುಲಿ ಸುಟ್ಟು ಹೋಗಿದೆ.

ಘಟನಾ ಸ್ಥಳಕ್ಕೆ ಶಾಸಕ ಅರಗ ಜ್ಞಾನೇಂದ್ರ, ಎಂಎಡಿಬಿ ಅಧ್ಯಕ್ಷ ಆರ್‌.ಎಂ ಮಂಜುನಾಥಗೌಡ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

You may also like