Home » Crime: ಮದುವೆಯಾದ 6 ತಿಂಗಳಿಗೆ ಪತ್ನಿಯ ಹತ್ಯೆ ಮಾಡಿದ ಪತಿ!

Crime: ಮದುವೆಯಾದ 6 ತಿಂಗಳಿಗೆ ಪತ್ನಿಯ ಹತ್ಯೆ ಮಾಡಿದ ಪತಿ!

0 comments

Nelamangala: ಪತ್ನಿ ಮೇಲೆ ಅನುಮಾನಗೊಂಡ ಪತಿಯೋರ್ವ ನಡುರಾತ್ರಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನೆಲಮಂಗಲ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಭಕ್ತನಪಾಳ್ಯದಲ್ಲಿ ನಡೆದಿರುವ ಕುರಿತು ವರದಿಯಾಗಿದೆ.

ಸಲ್ಮಾ (30) ಕೊಲೆಯಾದ ಮಹಿಳೆ. ಇಮ್ರಾನ್‌ (35) ಕೊಲೆ ಮಾಡಿದ ಪತಿ ಆರೋಪಿ.

ಇವರಿಬ್ಬರಿಗೆ ಮದುವೆಯಾಗಿ ಆರು ತಿಂಗಳಾಗಿತ್ತು. ಬೆಂಗಳೂರಿನ ವಿಜಯನಗರದಲ್ಲಿ ಇವರಿಬ್ಬರು ವಾಸವಾಗಿದ್ದರು. ನಂತರ ನೆಲಮಂಗಲದ ಭಕ್ತನಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿದ್ದರು. ಇಮ್ರಾನ್‌ ಸಲ್ಮಾಳನ್ನು ಎರಡನೇ ಮದುವೆಯಾಗಿದ್ದ. ಅನೈತಿಕ ಸಂಬಂಧದ ಬಗ್ಗೆ ಇಮ್ರಾನ್‌ ಅನುಮಾನಗೊಂಡು ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಭಾನುವಾರ ಮನೆಯಲ್ಲಿ ಮಲಗಿದ್ದಾಗ ತಡರಾತ್ರಿ 1.30ರ ಸಂದರ್ಭ ಕತ್ತುಹಿಸುಕಿ ಕೊಲೆ ಮಾಡಲಾಗಿದೆ.

ನೆಲಮಂಗಲ ನಗರ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ.

You may also like