Shirsi: 2025 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಫಲಿತಾಂಶದಲ್ಲಿ ಹಲವಾರು ವಿಶೇಷತೆಗಳನ್ನು ನಾವು ಕಾಣಬಹುದು. ಸಂತೆಗೆ ಇದೀಗ ಇನ್ನೊಂದು ಅವಳೇ ಜವಳಿ ಜೋಡಿ ಒಂದೇ ರೀತಿಯ ರ್ಯಾಂಕ್ ಅನ್ನು ಪಡೆದುಕೊಂಡಿದೆ.
ಹೌದು, ಬೆಂಗಳೂರಿನ ದೀಕ್ಷಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಶಿರಸಿಯ ಪ್ರಸಿದ್ಧ ವೈದ್ಯ ದಂಪತಿ ಡಾ. ದಿನೇಶ ಹೆಗಡೆ- ಡಾ. ಸುಮನ್ ಹೆಗಡೆ ಅವರ ಅವಳಿ-ಜವಳಿ ಮಕ್ಕಳಿಬ್ಬರು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯಮಟ್ಟದಲ್ಲಿ 6ನೇ ಯಾಂಕ್ ಪಡೆದಿದ್ದಾರೆ. 600ಕ್ಕೆ 594 ಅಂಕ ಪಡೆದು ಶೇ. 99 ಸಾಧನೆ ಮಾಡಿದ (ಅವಳಿ-ಜವಳಿ) ವಿದ್ಯಾರ್ಥಿಗಳಾದ ದಕ್ಷ ಹಾಗೂ ರಕ್ಷಾ ಇಬ್ಬರೂ ಒಂದೇ ಸಂಖ್ಯೆಯ ಅಂಕ ಪಡೆದಿರುವುದು ವಿಶೇಷ.
ಅಂದಹಾಗೆ ದಕ್ಷ ನಿಗೆ 4 ವಿಷಯದಲ್ಲಿ ಶೇ.100, ರಕ್ಷಾನಿಗೆ 2 ವಿಷಯದಲ್ಲಿ ಶೇ 100 ಅಂಕ ಪಡೆದಿದ್ದಾರೆ. ರಕ್ಷಾ ಕಳೆದ ಜೆಇಇ ಮೆನ್ಸ್ ಬಿಆರ್ ಕ್ ನಲ್ಲಿ ದೇಶಕ್ಕೆ 5ನೇ ರ್ಯಾಂಕ್ ಪಡೆದಿದ್ದು ಹೆಮ್ಮೆಯ ವಿಚಾರವಾಗಿತ್ತು.
