Shocking : ಯುವಕನೊಬ್ಬ ಲೈಂಗಿಕ ತೃಪ್ತಿಗಾಗಿ ತನ್ನ ಖಾಸಗಿ ಅಂಗದಲ್ಲಿ ವೈಬ್ರೇಟರ್ ತುರುಕಿಕೊಂಡಿರುವಂತಹ ವಿಚಿತ್ರ ಘಟನೆ ಒಂದು ಬೆಳಕಿಗೆ ಬಂದಿದೆ. ಎಕ್ಸ-ರೇ ತೆಗೆದ ವೈದ್ಯರೇ ಇದನ್ನು ನೋಡಿ ಶಾಕ್ ಆಗಿದ್ದಾರೆ.
ತೈವಾನ್‌ನ ಕಾವೋಸಿಯುಂಗ್‌ನ 24 ವರ್ಷದ ಯುವಕನೊಬ್ಬ ತೀವ್ರ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ. ಈ ವೇಳೆ ಎಕ್ಸರೇ ಮಾಡಿದ ವೈದ್ಯರು ಅವರ ಗುದನಾಳದಲ್ಲಿ 20 ಸೆಂ.ಮೀ ಆಳದಲ್ಲಿ ವೈಬ್ರೇಟರ್ ಸಿಲುಕಿಕೊಂಡಿರುವುದನ್ನು ಕಂಡು ಘಾತಕ್ಕೊಳಗಾಗಿದ್ದಾರೆ.
ವೈದ್ಯರು ಎಕ್ಸ್-ರೇನಲ್ಲಿ ಅದು ಗುದದ್ವಾರದಿಂದ ಕೊಲೊನ್ ವರೆಗೆ ಆಳವಾಗಿ ಸಿಲುಕಿಕೊಂಡಿರುವುದನ್ನು ಕಂಡುಹಿಡಿದರು. ಬಳಿಕ ಅವರು ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು, ಆದರೆ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆಯಿಂದಾಗಿ, ಎರಡು ದಿನಗಳ ನಂತರ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಆದಾಗ್ಯೂ, ಸುಮಾರು ಎರಡು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯ ನಂತರ, ವೈದ್ಯರು ಅವರ ದೇಹದಿಂದ ವೈಬ್ರೇಟರ್ ಅನ್ನು ಹೊರತೆಗೆದರು. ವೈಬ್ರೇಟರ್ ಹೊರತೆಗೆದಾಗಲೂ ಅದು ಆನ್ ಆಗಿತ್ತು ಎಂಬುದು ಗಮನಾರ್ಹ.
