Home » ‘ಚೀನಾ ಬಿಟ್ಟು, ಎಲ್ಲಾ ದೇಶಗಳಿಗೆ 90 ದಿನ ‘ಸುಂಕ ವಿರಾಮ’: ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಣೆ!

‘ಚೀನಾ ಬಿಟ್ಟು, ಎಲ್ಲಾ ದೇಶಗಳಿಗೆ 90 ದಿನ ‘ಸುಂಕ ವಿರಾಮ’: ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಣೆ!

by ಹೊಸಕನ್ನಡ
0 comments

ವಾಷಿಂಗ್ಟನ್: ಅಮೆರಿಕದ ಸುಂಕದ ಭೀತಿ ಜಗತ್ತಿನಾದ್ಯಂತ ಹೊಸ ಸುಂಕ ಯುದ್ದವನ್ನೇ ಆರಂಭಿಸಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಲೇ ಈ ವಿವಾದ ಭರಿತ ಸುಂಕ ನಡೆಗೆ ಡೊನಾಲ್ಡ್ ಟ್ರಂಪ್ (Donald Trump) ತಾತ್ಕಾಲಿಕ ವಿರಾಮ ಘೋಷಿಸಿದ್ದಾರೆ.

ಜಗತ್ತಿನಾದ್ಯಂತ ಅಮೆರಿಕಾದ ಹೊಸ ಸುಂಕ ಕಲ್ಲೊಲವನ್ನೆ, ಸೃಷ್ಟಿಸಿದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಲೇ ಈ ವಿವಾದಾತ್ಮಕ ನಡೆಗೆ ಡೊನಾಲ್ಡ್ ಟ್ರಂಪ್ 90 ದಿನಗಳ ವಿರಾಮ ಘೋಷಣೆ ಮಾಡಿದ್ದಾರೆ. ಆದರೆ ಈ ಸುಂಕ ವಿರಾಮದಿಂದ ಚೀನಾ ಸೇರಿದಂತೆ ಜಗತ್ತಿನ ಕೆಲ ನಿರ್ದಿಷ್ಟ ದೇಶಗಳನ್ನು ದೂರ ಇರಿಸಲಾಗಿದೆ ಎಂದು ಶ್ವೇತಭವನದ ತಿಳಿಸಿವೆ.

ಡೊನಾಲ್ಡ್ ಟ್ರಂಪ್ ರ ಈ ನಡೆ ಸುಂಕ ಏರಿಕೆ ಕ್ರಮವನ್ನು ಹೇಗೆ ಎದುರಿಸಬೇಕು ಎಂದು ಗೊಂದಲದಲ್ಲಿದ್ದ ಜಗತ್ತಿನ ಹಲವು ದೇಶಗಳಿಗೆ ಯೋಚಿಸಿ ಕ್ರಮ ಕೈಗೊಳ್ಳಲು ಸಮಯ ನೀಡಿದಂತಾಗಿದೆ.

ಈ ಬಗ್ಗೆ ಸೋಶಿಯಲ್‌ ಮೀಡಿಯಾ ಪೋಸ್ಟ್ ಮಾಡಿರುವ ಟ್ರಂಪ್, ಚೀನಾ ಇನ್ನೂ ತನ್ನ ದೇಶವನ್ನು “ಸುಲಿಗೆ ಮಾಡುತ್ತಿದೆ”. ಅದು ವಿಶ್ವ ಮಾರುಕಟ್ಟೆಗಳಿಗೆ ತೋರಿಸಿರುವ ಗೌರವದ ಕೊರತೆಯ ಆಧಾರದ ಮೇಲೆ, ಅಮೆರಿಕವು ಚೀನಾಕ್ಕೆ ವಿಧಿಸುವ ಸುಂಕವನ್ನು 125% ಕ್ಕೆ ಹೆಚ್ಚಿಸುತ್ತಿದ್ದೇನೆ, ಇದು ತಕ್ಷಣವೇ ಜಾರಿಗೆ ಬರುತ್ತದೆ ಎಂದಿದ್ದಾರೆ.

ಮುಂದಿನ ದಿನಗಳಲ್ಲಿ, ಅಮೆರಿಕ ಮತ್ತು ಇತರ ದೇಶಗಳನ್ನು ಸುಲಿಗೆ ಮಾಡುವ ದಿನಗಳು ಇನ್ನು ಮುಂದೆ ಬಹುಕಾಲ ನಡೆಯುವುದಿಲ್ಲ ಮತ್ತು ಅದು ಸ್ವೀಕಾರಾರ್ಹವಲ್ಲ ಎಂದು ಚೀನಾ ಅರಿತುಕೊಳ್ಳುತ್ತದೆ ಎಂದು ಆಶಿಸುತ್ತೇನೆ ಎಂದು ಟ್ರಂಪ್ ಹೇಳಿದರು.

ಈ ಸುಂಕ ಹೇರಿಕೆ ಚೀನಾ ಮಾತ್ರವಲ್ಲ, ಅಮೆರಿಕ ಮೇಲೆ ದುಬಾರಿ ಸುಂಕ ಹೇರುವ ರಾಷ್ಟ್ರಗಳಿಗೂ ಪಾಠವಾಗಲಿದೆ ಎನ್ನುತ್ತಲೇ ಅವರು, ನಾನು 90 ದಿನಗಳ ವಿರಾಮವನ್ನು ಅಧಿಕೃತಗೊಳಿಸಿದ್ದೇನೆ ಎಂದು ಹೇಳಿದ್ದಾರೆ.

You may also like