3
Chennai: ಮೀನು ಬೇಟೆಯಾಡಲೆಂದು ಹೋದ ಯುವಕ ಆ ಮೀನಿನಿಂದಲೇ ಪ್ರಾಣ ಕಳೆದುಕೊಂಡ ಭಯಾನಕ ಘಟನೆ ತಮಿಳುನಾಡಿದ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಅರಯಪಕ್ಕಂ ಗ್ರಾಮದ ಮಣಿಗಂಡನ್ (29) ಎಂದು ಗುರುತಿಸಲಾಗಿದೆ.
ಮಣಿಗಂಡನ್ ಕೂಲಿ ಕಾರ್ಮಿಕನಾಗಿದ್ದು, ಬಲೆ, ಗಾಳ ಇಲ್ಲದೇ ಬರಿಗೈಯಲ್ಲಿಯೇ ಮೀನು ಬೇಟೆಯಾಡುವುದನ್ನು ಖ್ಯಾತನಾಗಿದ್ದ. ಕಳೆದ ಮಂಗಳವಾರ ತನ್ನದೇ ಊರಿನಲ್ಲಿರುವ ಕೀಳವಳಮ್ ಕೆರೆಗೆ ಮೀನು ಬೇಟೆಗೆ ಹೋಗಿದ್ದಾಗ, ಒಂದು ಮೀನನ್ನು ಬೇಟೆ ಮಾಡಿದ್ದು, ಇನ್ನೊಂದು ಮೀನು ಹಿಡಿಯಲು ಮುಂದಾಗಿದ್ದಾರೆ. ಆದರೆ ಕೈಯಲ್ಲಿದ್ದ ಮೀನನ್ನು ಬಾಯಿಯಲ್ಲಿ ಕಚ್ಚಿ ಹಿಡಿದು ಇನ್ನೊಂದು ಮೀನು ಹಿಡಿಯಲು ಮುಂದಾಗಿದ್ದ ಸಮಯದಲ್ಲಿ ಮೀನು ಒಮ್ಮೆಲೇ ಆತನ ಬಾಯಿಯೊಳಗೆ ಹೋಗಿ ಗಂಟಲಲ್ಲಿ ಸಿಲುಕಿದೆ.
ಕೂಡಲೇ ಮಣಿಗಂಡನ್‌ಗೆ ಉಸಿರಾಡಲು ಸಮಸ್ಯೆಯಾಗಿದೆ. ಆತನನ್ನು ಆಸ್ಪತ್ರೆಗೆ ಕೂಡಲೇ ಕರೆದುಕೊಂಡು ಬಂದಿದ್ದಾರೆ. ಆದರೆ ಆತನ ಪ್ರಾಣಪಕ್ಷಿ ದಾರಿಮಧ್ಯೆನೇ ಹೋಗಿದೆ.
