Home » Darshan: ದರ್ಶನ್ ಗೆ ಎದುರಾದ ಮೀಡಿಯಾ – ಆ ಪ್ರಶ್ನೆ ಕೇಳು ತ್ತಿದ್ದಂತೆ ಶ್…. ಎಂದ ಡಿ ಬಾಸ್

Darshan: ದರ್ಶನ್ ಗೆ ಎದುರಾದ ಮೀಡಿಯಾ – ಆ ಪ್ರಶ್ನೆ ಕೇಳು ತ್ತಿದ್ದಂತೆ ಶ್…. ಎಂದ ಡಿ ಬಾಸ್

0 comments

Darshan: ಜೈಲಿನಿಂದ ಬಿಡುಗಡೆಯಾದ ಬಳಿಕ ದರ್ಶನವರಿಗೆ ತೀವ್ರವಾದ ಬೆನ್ನು ನೋವು ಕಾಡುತ್ತಿತ್ತು ಈ ಬೆನ್ನು ನೋವಿನ ನಡುವೆಯೂ ಅವರು ತಮ್ಮ ಪರಮಾಪ್ತ ಧನ್ವೀರ ಅವರ ಹೊಸ ಚಿತ್ರದ ವೀಕ್ಷಣೆಗಾಗಿ ಬೆಂಗಳೂರಿನ ಜಿಟಿ ವರ್ಲ್ಡ್ ಮಾಲ್‌ನ ಪಿವಿಆರ್‌ ಆಗಮಿಸಿದ್ದರು.

ಚಿತ್ರ ವೀಕ್ಷಣೆಯ ಬಳಿಕ ದರ್ಶನ್ ಅವರಿಗೆ ಮಾಧ್ಯಮದವರು ಎದುರಾಗಿದ್ದಾರೆ. ಹೀಗೆ ಚಿತ್ರದ ಬಗ್ಗೆ ಮಾತನಾಡಿ ಮುಗಿಸಿದ ಬೆನ್ನಲ್ಲೇ ಪತ್ರಕರ್ತರೊಬ್ಬರು ಇನ್ನೊಂದು ಪ್ರಶ್ನೆ ಎಂದಿದ್ದಾರೆ. ಅಷ್ಟರಲ್ಲಿ ದರ್ಶನ್ ಶ್.. ಎನ್ನುತ್ತಾ ಕೈ ಸನ್ನೆ ಮಾಡಿ ಅಲ್ಲಿಂದ ತೆರಳುತ್ತಾ ಸಿನಿಮಾ ಬಗ್ಗೆ ಮಾತ್ರ ಮಾತನಾಡಬೇಕು ಎಂದಿದ್ದಾರೆ.

ಪತ್ರಕರ್ತ ಸಹ ಸಿನಿಮಾ ಬಗ್ಗೆಯೇ ನನ್ನ ಪ್ರಶ್ನೆ ಸಹ ಎನ್ನುತ್ತಿದ್ದಂತೆ ನಗು ನಗುತ್ತಾ ದರ್ಶನ್ ಹಾಗಾದರೆ ಕೇಳಿ ಎಂದಿದ್ದಾರೆ. ದರ್ಶನ್ ರೇಣುಕಾಸ್ವಾಮಿ ಪ್ರಕರಣದ ಕುರಿತಾದ ಪ್ರಶ್ನೆ ಇರಬಹುದು ಎಂದು ಈ ರೀತಿ ಪ್ರತಿಕ್ರಿಯಿಸಿದ್ದಾರೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಕಾರಣ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿರುವುದರಿಂದ ಆ ಕುರಿತ ಪ್ರಶ್ನೆಗಳು ಬೇಡ ಎಂದು ಈ ರೀತಿ ನಡೆದುಕೊಂಡಿದ್ದಾರೆ.

You may also like