Home » Yadagiri: ಬೊಲೆರೋ-ಸಾರಿಗೆ ಬಸ್‌ ಅಪಘಾತ- ಸ್ಥಳದಲ್ಲೇ ನಾಲ್ವರು ಸಾವು!

Yadagiri: ಬೊಲೆರೋ-ಸಾರಿಗೆ ಬಸ್‌ ಅಪಘಾತ- ಸ್ಥಳದಲ್ಲೇ ನಾಲ್ವರು ಸಾವು!

0 comments

Yadagiri: ಬೊಲೆರೋ ಹಾಗೂ ಸಾರಿಗೆ ಬಸ್‌ ನಡುವೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮದ್ದರಕಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಮೃತರನ್ನು ಚಾಲಕ ಶರಣಪ್ಪ (30), ಸುನೀತಾ (19), ಸೋಮವ್ವ (50), ತಂಗಮ್ಮ (50) ಎಂದು ಗುರುತಿಸಲಾಗಿದೆ.

ಬೊಲೆರೋ ವಾಹನದಲ್ಲಿ ಕುಟುಂಬದವರು ಕಲಬುರಗಿಯ ಘತ್ತರಗಿ ಭಾಗ್ಯವಂತಿ ದೇವರ ಕಾರ್ಯಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಹಲವು ಈ ಅಪಘಾತದಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಭೀಮರಾಯನಗುಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

You may also like