SSLC: ರಾಜ್ಯದಲ್ಲಿ 2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಡೆಸಿತ್ತು. ಮಾರ್ಚ್ 21 ರಿಂದ ಏಪ್ರಿಲ್ 4ರವರೆಗೆ ಸುಸೂತ್ರವಾಗಿ ಪರೀಕ್ಷೆಗಳು ನಡೆದಿದ್ದು, ಇದೀಗ ವಿದ್ಯಾರ್ಥಿಗಳು ಹಾಗೂ ಪೋಷಕರು ಫಲಿತಾಂಶಕ್ಕಾಗಿ ಕಾದು ಕುಳಿತಿದ್ದಾರೆ. ಏಪ್ರಿಲ್ 11ರಿಂದಲೇ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆರಂಭ ಆಗಬೇಕಿತ್ತು. ಆದರೆ ಇದೀಗ ಈ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ.
ಹೌದು, ರಾಜ್ಯದಲ್ಲಿ ಶಾಲಾ ಶಿಕ್ಷಣ ಹಾಗೂ ಮೌಲ್ಯ ನಿರ್ಣಯ ಮಂಡಳಿ ನಿಗದಿಪಡಿಸಿದಂತೆ 2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆ ಏಪ್ರಿಲ್ 11ರಿಂದಲೇ ಆರಂಭ ಆಗಬೇಕಿತ್ತು. ಆದರೆ, ಇದೀಗ ಮಂಡಳಿಯು ಮೌಲ್ಯಮಾಪನವನ್ನು ಮುಂದೂಡಿಕೆ ಮಾಡಿದೆ. ಈಗಾಗಲೇ ಮೌಲ್ಯಮಾಪನದಲ್ಲಿ ಭಾಗಿ ಆಗಬೇಕಿದ್ದ ಶಿಕ್ಷಕರು, ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತಿಳಿಸಲಾಗಿತ್ತು. ಆದ್ದರಿಂದ ಅವರು ಕೂಡ ತಯಾರಿ ನಡಸಿಕೊಂಡಿದ್ದರು. ಆದರೆ ಇದೀಗ ಎಲ್ಲರಿಗೂ ಮೌಲ್ಯಮಾಪನ ಮುಂದೆ ಹೋಗಿರುವ ಸಂದೇಶ ಬಂದಿದೆ
ಇನ್ನು ಮೌಲ್ಯಮಾಪನವು ಏಪ್ರಿಲ್ 15ರಿಂದ ಆರಂಭ ಆಗಲಿದೆ. ಒಂದು ವಾರದಲ್ಲಿಯೇ ಮೌಲ್ಯಮಾಪನ ಮುಕ್ತಾಯ ಆಗಲಿದ್ದು, ಏಪ್ರಿಲ್ ಅಂತ್ಯದಲ್ಲೇ ಫಲಿತಾಂಶ ಪ್ರಕಟಿಸುವ ಸಾಧ್ಯತೆಯಿದೆ ಎಂದು ಹೇಲಾಗುತ್ತಿದೆ. ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ ಪ್ರತಿ ಜಿಲ್ಲೆಯಲ್ಲೂ ಮೌಲ್ಯಮಾಪನ ಕೇಂದ್ರಗಳನ್ನು ಆರಂಭಿಸಲಾಗುತ್ತಿದ್ದು, ವಿಷಯವಾರು ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯಲಿದೆ. ಬೆಂಗಳೂರಿನಲ್ಲಿಯೇ ಹೆಚ್ಚಿನ ಕೇಂದ್ರಗಳು ಇರಲಿವೆ.
ಅಲ್ಲದೆ 25 ಸಾವಿರಕ್ಕೂ ಅಧಿಕ ಶಿಕ್ಷಕರು 8.50 ಲಕ್ಷಕ್ಕೂ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವರು. ಈಗ ತಂತ್ರಜ್ಞಾನ ಆಧಾರದಲ್ಲಿ ಅಂಕಗಳ ಅಂತಿಮಗೊಳಿಸುವ ಪ್ರಕ್ರಿಯೆ ಆಗುವುದರಿಂದ ಬಹುತೇಕ ಮೂರನೇ ವಾರಕ್ಕೆ ಪ್ರಕ್ರಿಯೆ ಮುಗಿಯಲಿದೆ
ಮೌಲ್ಯಮಾಪನ ಮುಂದೂಡಲು ಕಾರಣ?
ಏಪ್ರಿಲ್ 12ರಿಂದ ಎರಡು ದಿನ ವಾರಾಂತ್ಯ ರಜೆ ಇರಲಿದೆ. ಅಲ್ಲದೆ, ಸೋಮವಾರ ಡಾ.ಅಂಬೇಡ್ಕರ್ ಅವರ ಜಯಂತಿಯೂ ಇರುವುದರಿಂದ 3 ದಿನದ ಬಳಿಕವೇ ಮೌಲ್ಯಮಾಪನ ಆರಂಭಿಸಿ ಎಂದು ತಿಳಿಸಲಾಗಿದೆ. ಆದ್ದರಿಂದ ಏಪ್ರಿಲ್ 15ರಿಂದಲೇ ಮೌಲ್ಯಮಾಪನ ಆರಂಭವಾಗಲಿದೆ.
