Home » Guruvayanakere: ಬೈಕ್ ಟಿಪ್ಪರ್ ಭೀಕರ ಅಪಘಾತ – ಬೈಕ್ ಸವಾರ ಸಾವು, ಒಬ್ಬ ಗಂಭೀರ

Guruvayanakere: ಬೈಕ್ ಟಿಪ್ಪರ್ ಭೀಕರ ಅಪಘಾತ – ಬೈಕ್ ಸವಾರ ಸಾವು, ಒಬ್ಬ ಗಂಭೀರ

0 comments

Guruvayanakere: ಬೆಳ್ತಂಗಡಿ ಬಳಿಯ ಗುರುವಾಯನಕೆರೆಯಲ್ಲಿ ಬೈಕ್ ಮತ್ತು ಟಿಪ್ಪರ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡಿದ್ದಾನೆ.

ಗುರುವಾಯನಕೆರೆ ಉಪ್ಪಿನಂಗಡಿ ರಸ್ತೆಯ ಸನ್ಯಾಸಿಕಟ್ಟೆ ಬಳಿ ಎ.14 ರ ಸೋಮವಾರ ಈ ಭೀಕರ ಅಪಘಾತ ನಡೆದಿದೆ. ಮೃತಪಟ್ಟ ಬೈಕ್ ಸವಾರ, ಮೂಲತಃ ಶಿವಮೊಗ್ಗ ಜಿಲ್ಲೆಯ ಉಪೇಂದ್ರ (35) ಮೃತ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಈತ ಗುರುವಾಯನಕೆರೆ ಸ್ಥಳೀಯ ಕಾಲೇಜಿನ ಹಾಸ್ಟೆಲ್ ನಲ್ಲಿ ಅಡುಗೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದರು.

ಇನ್ನು ಸಹಸವಾರ ಮೋಹನ್ ಅವರು ಗಂಭೀರ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ಅವರಿಗೆ ಗಂಭೀರ ಪ್ರಮಾಣದ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

You may also like