Home » Mallikarjun Kharge: ಆಜಾನ್‌ ಕೇಳಿ 10 ನಿಮಿಷ ಭಾಷಣ ನಿಲ್ಲಿಸಿ ಮೌನವಾಗಿದ್ದ ಖರ್ಗೆ!

Mallikarjun Kharge: ಆಜಾನ್‌ ಕೇಳಿ 10 ನಿಮಿಷ ಭಾಷಣ ನಿಲ್ಲಿಸಿ ಮೌನವಾಗಿದ್ದ ಖರ್ಗೆ!

0 comments
Mallikarjun Kharge

Mallikarjun Kharge: ಕಲಬುರಗಿಯಲ್ಲಿ ಬುಧವಾರ ನಡೆದ ಉದ್ಯೋಗ ಮೇಳದಲ್ಲಿ ಭಾಷಣ ಮಾಡುತ್ತಿದ್ದಾಗ ಪಕ್ಕದ ಮಸೀದಿಯಿಂದ ಆಜಾನ್‌ ಶಬ್ದ ಕೇಳಿ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ 10 ನಿಮಿಷ ಮೌನವಾದ ಘಟನೆ ನಡೆದಿದೆ. ಬುಧನವಾರ ಕಲಬುರಗಿಯಲ್ಲಿ ಹಮ್ಮಿಕೊಂಡಿದ್ದ ಉದ್ಯೋಗಮೇಳ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡುತ್ತಿದ್ದಾಗ ಪಕ್ಕದ ಮಸೀದಿಯಿಂದ ಆಜಾನ್‌ ಘೋಷಣೆ ಕೇಳಿಬಂದಿದ್ದಕ್ಕೆ 10 ನಿಮಿಷಗಳ ಕಾಲ ಭಾಷಣ ನಿಲ್ಲಿಸಿ ಖರ್ಗೆ ಮೌನವಾದರು.

ಅಜಾನ್‌ ಮುಗಿಯುತ್ತಿದ್ದಂತೆ ಖರ್ಗೆ ತಮ್ಮ ಮಾತು ಮುಂದುವರಿಸಿದರು. ಈ ಸಂದರ್ಭದಲ್ಲಿ ಬಹುಸಂಖ್ಯೆಯಲ್ಲಿ ಸೇರಿದ್ದ ಮುಸಲ್ಮಾನವರು ಜೋರಾಗಿ ಕರತಾಡನ ಮಾಡಿದ್ದು, ಖರ್ಗೆ ನಡೆಯನ್ನು ಸ್ವಾಗತ ಮಾಡಿದರು.

You may also like