9
Bantwala: ರಸ್ತೆ ಅಪಘಾತದಲ್ಲಿ ಬಂಟ್ವಾಳ ತಾಲೂಕಿನ ಇಂಡಿಯನ್ ಕೆಥೋಲಿಕ್ ಯೂತ್ ಮೂಮೆಂಟ್ ತೊಡಂಬಿಲ ಘಟಕದ ಅಧ್ಯಕ್ಷ ಮೆಲ್ರಾಯ್ ಡಿಸೋಜ (25) ಸಾವಿಗೀಡಾದ ಘಟನೆ ನಡೆದಿದೆ.
ಮಂಗಳವಾರ ರಾತ್ರಿ ಬೈಕ್‌ನಲ್ಲಿ ತನ್ನ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ರಸ್ತೆ ಮಧ್ಯದ ಗುಂಡಿ ತಪ್ಪಿಸಲೆಂದು ಹೋಗಿದ್ದು, ಪಲ್ಟಿಯಾಗಿ ರಸ್ತೆಗೆ ಬಿದ್ದ ಮೆಲ್ರಾಯ್ ಡಿಸೋಜ ತೀವ್ರ ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದರೂ ತಲೆಗೆ ಪೆಟ್ಟು ಬಿದ್ದುದರಿಂದ ಸಾವಿಗೀಡಾಗಿದ್ದಾರೆ.
