8
Ghaziabad: ರಿಯಲ್ ಎಸ್ಟೇಟ್ ಉದ್ಯಮಿ ತನ್ನ ಪತ್ನಿಯನ್ನು ಗುಂಡಿಕ್ಕಿ ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಗಾಜಿಯಾಬಾದ್‌ನಲ್ಲಿ ನಡೆದಿದೆ.
ಕುಲದೀಪ್ ತ್ಯಾಗಿ (46) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಡೆತ್‌ನೋಟಲ್ಲಿ, ʼ ನನಗೆ ಕ್ಯಾನ್ಸರ್ ಇತ್ತು. ಹಣ ವ್ಯರ್ಥವಾಗಬಾರದು ಇದಕ್ಕಾಗಿ ಎನ್ನುವ ನಿರ್ಧಾರ ಮಾಡಿದೆವು. ಪತ್ನಿ ಅಂಶು ತ್ಯಾಗಿ ಮತ್ತು ನಾನು ಒಟ್ಟಿಗೆ ಇರುವುದಗಿ ನಿರ್ಧಾರ ಮಾಡಿದೆವು. ಹೀಗಾಗಿ, ಅವಳನ್ನೂ ಕೊಂದಿದ್ದೇನೆʼ ಎಂದು ಬರೆಯಲಾಗಿದೆ.
ಇಬ್ಬರು ಗಂಡು ಮಕ್ಕಳಿದ್ದು, ಕುಲದೀಪ್ ಅವರ ತಂದೆ ನಿವೃತ್ತ ಪೊಲೀಸ್ ಅಧಿಕಾರಿ.
ಪರವಾನಗಿ ಪಡೆದ ರಿವಾಲ್ವರ್‌ನಿಂದ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಗುಂಡೇಟಿನ ಶಬ್ದಕ್ಕೆ ಅವರ ಪುತ್ರರು ಮನೆಯಲ್ಲೇ ಇದ್ದಿದ್ದು, ಕೋಣೆ ಬಂದಿದ್ದಾರೆ. ನಂತರ ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಅಷ್ಟರಲ್ಲೇ ಅವರಿಬ್ಬರು ಸಾವಿಗೀಡಾಗಿದ್ದರು.
