Bantwala: ಅಮಲು ಪದಾರ್ಥ ಸೇವಿಸಿ ಬಸ್ ಚಲಾವಣೆ ಮಾಡಿದ ಚಾಲಕನಿಂದ ಅಪಘಾತ ಸಂಭವಿಸಿದ್ದು, ಪರಿಣಾಮ ಬೈಕ್ ಸವಾರರಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯ ತುಂಬೆ ಎಂಬಲ್ಲಿ ನಡೆದಿದೆ.
ಎ.15 ರ ಮಂಗಳವಾರ ಮುಂಜಾನೆ ಈ ಘಟನೆ ನಡೆದಿದೆ.
ಕೆಎಸ್‌ಆರ್‌ಟಿಸಿ ಬಸ್ ಚಾಲಕ ದಿಲೀಪ್ ನದಾಫ್ ಆರೋಪಿ. ಮಹಮ್ಮದ್ ಸುನೈಫ್, ಮಹಮ್ಮದ್ ನಿಜಾಮುದ್ದೀನ್ ಗಾಯಾಳುಗಳು.
ಮಂಗಳೂರು ಕಡೆಯಿಂದ ಬಿಸಿ ರೋಡು ಕಡೆಗೆ ಹೋಗುತ್ತಿದ್ದ ಬೈಕ್ ಸವಾರರಿಬ್ಬರಿಗೆ, ತುಂಬೆಯಲ್ಲಿ ಹಿಂಬದಿಯಿಂದ ಬಂದ ಬಸ್ ಡಿಕ್ಕಿ ಹೊಡೆದಿದೆ. ಅಜಾಗರೂಕತೆಯ ಚಾಲನೆ, ವಿಪರೀತ ಅಮಲು ಪದಾರ್ಥ ಸೇವನೆ ಮಾಡಿದ ಬಸ್ ಚಾಲಕ ದಿಲೀಪ್ ನದಾಫ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರರಿಬ್ಬರು ಕೆಳಗೆ ಬಿದ್ದು ಅಲ್ಲಲ್ಲಿ ಗಾಯವಾಗಿದೆ.
ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸ್ ಚಾಲಕನ ವರ್ತನೆ ಕುರಿತು ಸಂಶಯಗೊಂಡ ಟ್ರಾಫಿಕ್ ಪೊಲೀಸರು ಪರೀಕ್ಷೆ ಮಾಡಿದಾಗ ಅಮಲು ಪದಾರ್ಥ ಸೇವನೆ ಮಾಡಿರುವುದ ಕಂಡು ಬಂದಿದೆ.
ಬಂಟ್ವಾಳ ಟ್ರಾಫಿಕ್ ಎಸ್.ಐ ಸುತೇಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲು ಮಾಡಿದ್ದಾರೆ.
