Home » Kaluburgi: ಆಂದೋಲ ಶ್ರೀ ಸಿದ್ದಲಿಂಗ ಸ್ವಾಮೀಜಿ ಮೇಲೆ ಎಫ್‌ಐಆ‌ರ್ ದಾಖಲು!

Kaluburgi: ಆಂದೋಲ ಶ್ರೀ ಸಿದ್ದಲಿಂಗ ಸ್ವಾಮೀಜಿ ಮೇಲೆ ಎಫ್‌ಐಆ‌ರ್ ದಾಖಲು!

0 comments

Kaluburgi: ಆಂದೋಲದ ಸಿದ್ಧಲಿಂಗ ಸ್ವಾಮೀಜಿ ವಿರುದ್ಧ ಚಿಂಚೋಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಮುದ್ವೇಷ ಹರಡುವ ಪ್ರಚೋದನಾ ಭಾಷಣ ಮತ್ತು ಕಾಂಗ್ರೆಸ್‌ ನಾಯಕರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಶ್ರೀಗಳ ಮೇಲೆ ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷ ಶರಣು ಪಾಟೀಲ್ ದೂರು ನೀಡಿದ್ದು ಅದರನ್ವಯ ಎಫ್‌ಐಆ‌ರ್ ದಾಖಲಿಸಲಾಗಿದೆ.

ಏ.15 ರಂದು ಚಿಂಚೋಳಿ ತಾಲ್ಲೂಕಿನ ಐನೊಳ್ಳಿ ಗ್ರಾಮದಲ್ಲಿ ಶ್ರೀ ರಾಮೋತ್ಸವ ಸಮಿತಿ ಆಯೋಜಿಸಿದ್ದ ಶ್ರೀ ರಾಮನವಮಿ ಉತ್ಸವದ ಕಾರ್ಯಕ್ರಮದಲ್ಲಿ ಆಂದೋಲದ ಸಿದ್ಧಲಿಂಗ ಸ್ವಾಮೀಜಿ, ಹಿಂದೂ-ಮುಸ್ಲಿಂ ಮಧ್ಯೆ ಕೋಮುದ್ವೇಷ ಹರಡುವಂಥ ಭಾಷಣ ಮಾಡಿದ್ದಾರೆ ಎನ್ನಲಾಗಿದೆ.

You may also like